ಗುಡ್ ನ್ಯೂಸ್ : ಕೊರೊನಾ ವೈರಸ್​ಗೆ ಔಷಧಿ ಶೋಧ ಕಾರ್ಯ ಬಹುತೇಕ ಅಂತಿಮ!

ಇಡೀ ವಿಶ್ವವನ್ನೇ ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಗೆ ಔಷಧಿ ಶೋಧ ಕಾರ್ಯ ಬಹುತೇಕ ಮುಕ್ತಾಯಗೊಳ್ಳುತ್ತಿದೆ.

ಹೌದು…  ಗಿಲೀಡ್ಸ್​ ಸೈನ್ಸ್​ ಐಎನ್​ಸಿ ಕಂಪನಿ ಕಂಡು ಹಿಡಿದಿರುವ ಆ್ಯಂಟಿವೈರಲ್ ರಿಮೆಡೆಸಿವಿರ್ ಔಷಧವನ್ನು ಕೋವಿಡ್ -19  ರೋಗಿಗಳಲ್ಲಿ ಪ್ರಯೋಗಿಸಲಾಗಿದ್ದು, ಔಷಧಿಯೂ ಬಹುತೇಕ ರೋಗಲಕ್ಷಣಗಳನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಸಹಕಾರಿಯಾಗಿದೆ ಎಂದು ಕಂಪನಿ ತಿಳಿಸಿದೆ.

ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ (ಎನ್​ಐಎಐಡಿ) ಈ ಪ್ರಯೋಗ ನಡೆಸಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಮತ್ತು ದತ್ತಾಂಶಗಳನ್ನು ಎನ್​ಐಎಐಡಿ ಶೀಘ್ರದಲ್ಲಿ ನೀಡಲಿದೆ ಎಂದು ಗಿಲೀಡ್ಸ್​ ತಿಳಿಸಿದೆ.

ತಡವಾಗಿ ಚಿಕಿತ್ಸೆ ಪಡೆದ ಶೇ.49 ರೋಗಿಗಳಿಗೆ ಹೋಲಿಸಿದರೆ, ಆರಂಭದಲ್ಲಿ ಚಿಕಿತ್ಸೆ ಪಡೆದ ಶೇ.62 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಕಂಪನಿ ಹೇಳಿದೆ.ಕೋವಿಡ್​-19 ಗೆ ಪ್ರಸ್ತುತ ಯಾವುದೇ ಅನುಮೋದಿತ ಚಿಕಿತ್ಸೆಗಳು ಅಥವಾ ತಡೆಗಟ್ಟುವ ಲಸಿಕೆಗಳು ಇಲ್ಲದಿರುವುದರಿಂದ ಗಿಲೀಡ್‌ ಶೋಧನೆಯ ಔಷಧಿಯ ಬಗ್ಗೆ ಆಸಕ್ತಿ ಹೆಚ್ಚಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights