ಫ್ಯಾಕ್ಟ್‌ಚೆಕ್ : ತಮಿಳುನಾಡಿನ ಪ್ರಾಚೀನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದು ಯಾರು ಗೊತ್ತೆ?

ತಮಿಳುನಾಡಿನ ತಿರುಪ್ಪೂರ್‌ನಲ್ಲಿರುವ ಪ್ರಾಚೀನ ಅವಿನಾಶಿ ಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ರಾತ್ರಿ ಹಿಂದೂ ವಿರೋಧಿಗಳು 63 ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಮತ್ತು ಹಾನಿಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ರಥ ಮಹೋತ್ಸವಕ್ಕೆ ಅಭೂತಪೂರ್ವ ಭಕ್ತಾದಿಗಳ ನೂಕುನುಗ್ಗಲು ಸಹಿಸದ ಹಿಂದೂ ದ್ವೇಷಿಗಳು ಇದು ಯೋಜಿತ ಪಿತೂರಿಯಾಗಿದೆ. ತಮಿಳುನಾಡು ಪೊಲೀಸರು ಇದರ ವಿರುದ್ದ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/SaffronSunanda/status/1660884562166308864

ಹಿಂದೂ ವಿರೋಧಿ ಮನಸ್ಥಿತಿಯವರು ಮಾಡಿರುವ ಪಿತೂರಿ  ಎಂದು ಕೋಮು ದ್ವೇಷದ ಹಿನ್ನಲೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪ್ರಾಚೀನ ದೇವಾಲಯದ ವಿಗ್ರಹಗಳನ್ನು ದುರುದ್ದೇಶದಿಂದ ಹೊಡೆದು ಹಾಕಲಾಗಿದೆಯೇ ಎಂದು ಈ ಪೋಸ್ಟ್‌ನಲ್ಲಿ ಮಾಡಿದ ಆರೋಪಗಳು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಮತ್ತು ಕೋಮು ದ್ವೇಷದ ಹಿನ್ನಲೆಯ ಆರೋಪವನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಕಳೆದ (ಮೇ 22) ರಾತ್ರಿ ಅಪರಿಚಿತ ವ್ಯಕ್ತಿಗಳು ಈ ಪುರಾತನ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

tiruppur Avinashi Lingeswarar Temple Burglary Attempt

ಪ್ರಕರಣಕ್ಕೆ ಸಂಬಂಧಿಸಿದಂತೆ ಶರವಣ ಭಾರತಿ (32) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ನಾಪತ್ತೆಯಾಗಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 63 ನಾಯನ್ಮಾರರ ವಿಗ್ರಹಗಳು ಭಗ್ನಗೊಂಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಸುದ್ದಿ ವರದಿಯೊಂದು ತಿಳಿಸಿದೆ. ಅವಿನಾಶಿಯಲ್ಲಿರುವ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದೆ.

ಕೊಂಗು ನಾಡಿನ ಏಳು ದೇವಾಲಯಗಳಲ್ಲಿ ಇದು ಮೊದಲ ದೇವಾಲಯ ಎಂದು ಹೇಳಲಾಗುತ್ತದೆ. ದರೋಡೆ ವೇಳೆ ಉಕ್ಕಿನ ಬೇಲಿಯನ್ನು ಕಳವು ಮಾಡಲಾಗಿದೆ.ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವಿನಾಸಿ ಡಿಎಸ್ಪಿ ಪೌಲರಾಜ್ ತಿಳಿಸಿದ್ದಾರೆ. ಲಿಂಗೇಶ್ವರ ದೇವಸ್ಥಾನದಲ್ಲಿ ಸಾಮಿ ವಿಗ್ರಹಗಳ ಕಳ್ಳತನ ಮತ್ತು ಧ್ವಂಸವು ಪ್ರದೇಶದಲ್ಲಿ ಸಂಚಲನ ಮೂಡಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಸೋಮವಾರ (ಮೇ 22) ರಾತ್ರಿ ತಿರುಪುರ್ ಜಿಲ್ಲೆಯ ಅವಿನಾಶಿ ಲಿಂಗೇಶ್ವರ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ತಮಿಳುನಾಡಿನಲ್ಲಿ ವರದಿಯಾಗಿದೆ. ಸರವಣಭಾರತಿ (32) ಎಂಬಾತನನ್ನು ಬಂಧಿಸಿ ಕಳ್ಳತನ ಮಾಡಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಎಲ್ಲಿಯೂ ಇದು ಹಿಂದೂ ವಿರೋಧಿಗಳು ನಡೆದಿದ್ದಾರೆ ಅಥವಾ ಅನ್ಯ ಧರ್ಮಿಯರು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಲ್ಲಿ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ನಿಜವೇ? ವಾಸ್ತವ ಇಲ್ಲಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights