ನಮಾಜ್ ಮಾಡುವ ವಿಚಾರಕ್ಕೆ ಮುಸ್ಲೀಮರಿಂದ ಪೊಲೀಸರ ಮೇಲೆ ಕಲ್ಲು ತೂರಾಟ…!
ನಮಾಜ್ ಮಾಡುವ ವಿಚಾರಕ್ಕೆ ಪೊಲೀಸ್ ಹಾಗೂ ಮುಸ್ಲಿಮರ ನಡುವೆ ವಾಗ್ವಾದ ನಡೆದಿದ್ದು, ಗಲಾಟೆ ತಾರಕಕ್ಕೇರಿ ಕಲ್ಲು ತೂರಾಟ ನಡೆದ ಘಟನೆ ಹುಬ್ಬಳ್ಳಿಯ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟೆ ಕಾಲೋನಿಯಲ್ಲಿ ನಡೆದಿದೆ.
ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ದೇಶವೇ ಲಾಕ್ ಡೌನ್ ಆಗಿ 10 ದಿನವಾಗಿದೆ. ದೇವಸ್ಥಾನಗಳಲ್ಲಿ, ಮಸೀದ್ ಗಳಲ್ಲಿ ಯಾವುದೇ ಸ್ಥಳಗಳಲ್ಲಿ ಜನ ಒಟ್ಟಿಗೆ ಸೇರುವಂತಿಲ್ಲ ಎಂದು ದೇಶದ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಕೂಡ ಮನವಿ ಮಾಡಿಕೊಂಡಿದೆ. ಹೀಗಿರುವಾಗ ನಮಾಜ್ ಮಾಡುವ ಪೊಲೀಸರು ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ ಹಾಗೂ ಮುಸ್ಲಿಮರ ನಡುವೆ ಗಲಾಟೆ ನಡೆದಿದೆ.

ರಾಜ್ಯಾದ್ಯಂತ ಲಾಕ್ ಡೌನ್ ಬೆನ್ನಲ್ಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಸಲುವಾಗಿ ಕೆಲ ಮೌಲ್ವಿಗಳು ಮನವಿ ಮಾಡಿಕೊಂಡಿದ್ದರು. ಮಸೀದ್ ಗಳಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುವುದಕ್ಕೆ ತಡೆವೊಡ್ಡಲಾಗಿದೆ. ಹೀಗಿದ್ದರೂ ನಮಾಜ್ ಮಾಡುವ ವಿಚಾರಕ್ಕೆ ಮುಸ್ಲಿಂ ಹಾಗೂ ಪೊಲೀಸರ ನಡುವೆ ಗಲಾಟೆಯಾಗಿ ಕಲ್ಲು ತೂರಾಟ ನಡೆದಿದೆ.
ದೆಹಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಬೆಳಗಾವಿಯ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ ಕಂಡಿದೆ ಎನ್ನುವ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೀಡಿದ್ದಾರೆ. ಹೀಗಿರುವಾಗ ಯಾವ ಮಸೀದ್ ಗಳಲ್ಲೇ ಆಗಿಲಿ ಸಾಮೂಹಿಕವಾಗಿ ಸೇರಿ ಸಮಾಜ್ ಮಾಡುವುದು ಅಪಾಯವೇ ಸರಿ.

ನಮಾಜ್ ವಿಷಯಕ್ಕೆ ಸಂಬಂಧಿಸಿದಂತೆ ಮೊದಲು ಪೊಲೀಸರ ಹಾಗೂ ಮುಸ್ಲಿಮರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಸ್ಥಳೀಯ ಕೆಲ ಯುವಕರು ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆಯಲ್ಲಿ ಮೂರು ಜನ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಹಳನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಸಂಬಂಧ ಟೌನ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

