ನೋಡಿ ಸ್ವಾಮಿ ಈ ಬೆಕ್ಕು ಇರೋದೇ ಹೀಗೆ….

ಸಾಮಾನ್ಯವಾಗಿ ಅದೆಷ್ಟು ಕೆ.ಜಿ ಬೆಕ್ಕನ್ನ ನೋಡಿರಬಹುದು..? ಅಮ್ಮಮ್ಮಾ ಅಂದರೆ 1 ರಿಂದ 5 ಕೆಜಿ ತೂಕದ ಬೆಕ್ಕನ್ನ ನೋಡಿರುತ್ತೀರಾ. ಆದ್ರೆ ಇಲ್ಲೊಂದು ಬೆಕ್ಕು ಬರೋಬ್ಬರಿ 11 ಕೆ.ಜಿ ಇದೆ ಕಣ್ರಿ.

ಭಾರೀ ಗಾತ್ರದ 11.7 ಕೆಜಿ ತೂಕವಿರುವ ಟ್ವಾಬಿ ಬೆಕ್ಕೊಂದು ಅಂತರ್ಜಾಲದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಪ್ರಾಣಿಗಳ ಶೆಲ್ಟರ್‌ ಹೋಂ ಒಂದು ’ಬೀಜೇ’ ಎಂಬ ಹೆಸರಿನ ಎರಡು ವರ್ಷದ ಈ ಬೆಕ್ಕಿನ ಚಿತ್ರವನ್ನು ತೆಗೆದು ಆತನನ್ನು ದತ್ತು ಪಡೆಯುವವರಿಗಾಗಿ ಶೋಧ ನಡೆಸುತ್ತಿದೆ.

ಫಿಲಡೆಲ್ಫಿಯಾದ ಮೊರಿಸ್‌ ಶೆಲ್ಟರ್‌ ಹೋಂ ಒಂದು ಬೆಕ್ಕನ್ನು ಯಾರಾದರೂ ದತ್ತು ಪಡೆದುಕೊಳ್ಳಲು ಬರುತ್ತಾರೆ ಎಂಬ ಆಶಯದಲ್ಲಿದೆ. ಬೆಕ್ಕಿನ ಗಾತ್ರವನ್ನು ನೋಡಿದ ನೆಟ್ಟಿಗರೊಬ್ಬರು, ಬೀಜೇ ಪೊಲೀಸ್‌ನ ಬೆಕ್ಕುಗಳ ಘಟಕ ಸೇರಲು ಸೂಕ್ತವಾಗಿದ್ದಾನೆ ಎಂದು ತಮಾಷೆ ಮಾಡಿದ್ದಾರೆ.

ಬೀಜೇನನ್ನು ದತ್ತು ಪಡೆಯಲು ಇಷ್ಟಪಟ್ಟ ಲಕ್ಷಾಂತರ ಮಂದಿ ಏಕಕಾಲದಲ್ಲಿ ಶೆಲ್ಟರ್‌ ಹೋಂನ ಜಾಲತಾಣಕ್ಕೆ ಭೇಟಿ ಕೊಟ್ಟ ಕಾರಣ ಕೆಲಕಾಲ ಸೈಟ್ ಕ್ರಾಶ್ ಆಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights