ಪಾವಗಡದಲ್ಲೊಂದು ದುರಂತ : ಬೆಂಕಿ ಆರಿಸಲು ಹೋದ ರೈತನೇ ಅಗ್ನಿಗಾಹುತಿ..!

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಹೊಸಳ್ಳಿ ಎಂಬ ಗ್ರಾಮವೊಂದರಲ್ಲಿ ತೊಗರಿ ಬೆಳೆ ಬಣವೆಗೆ ಬಿದ್ದಿದ್ದ ಬೆಂಕಿ ಆರಿಸಲು ಹೋಗಿ, ಅದೇ ಬೆಂಕಿಯಲ್ಲಿ ರೈತ ಸಿಲುಕಿ ಸಾವನ್ನಪ್ಪಿರುವ ಘಟನೆ ಜರುಗಿದೆ…

ತೊಗರಿ ಬೆಳೆಗೆ ಆಕಸ್ಮಿಕವಾಗಿ ಬಿದ್ದಿದ್ದ ಬೆಂಕಿಯನ್ನು ಆರಿಸಲು ಹೋದ ರೈತನೊಬ್ಬ ಬೆಂಕಿಯಲ್ಲಿ ಸಿಲುಕಿ ಸುಟ್ಟು‌ ಮೃತಪಟ್ಟಿರುವ ಘಟನೆ, ಪಾವಗಡ ತಾಲೂಕಿನ ಹೋಸಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಹೊಸರಾಂನಾಯ್ಕ್ (60) ವರ್ಷ ಮೃತಪಟ್ಟವರು, ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆಯ ಬಣವೆ ಹಾಕಲಾಗಿತ್ತು. ಬಣಿವೆಯ ಸಮೀಪದಲ್ಲಿ ಬಿದ್ದಿದ್ದ ಬೆಂಕಿ ಹಾರಿಸಲು ಪ್ರಯತ್ನಿಸುವ ವೇಳೆ ಸುತ್ತಲೂ ಇದ್ದ ಒಣ ಹುಲ್ಲಿಗೆ ಬೆಂಕಿ ತಗುಲಿದ ಪರಿಣಾಮ ರೈತ ಬೆಂಕಿಯಲ್ಲಿ ಸಿಲುಕಿ ಸಂಪೂರ್ಣ ಸುಟ್ಟು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಂಕಿಯಲ್ಲಿ ರೈತ ಸಿಲುಕಿ ಸಾವನಪ್ಪಿರುವ ಸ್ಥಳಕ್ಕೆ ಅಗ್ನಿಶಾಮಕ ದಳ ಬರುವ ವೇಳೆಗೆ ರೈತ ಸಂಪೂರ್ಣವಾಗಿ ಸುಟ್ಟು ಹೋಗಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಿರುಮಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights