ಪೌರತ್ವ ಮಸೂದೆ ವಿರುದ್ಧ ಕಿಡಿ – ಪ್ರಧಾನಿ ಮೋದಿ – ಅಮಿತ್ ಶಾಗೆ ಬಳೆ…!

ಕಲಬುರ್ಗಿಯಲ್ಲಿ ರಾಷ್ಟ್ರೀಯ ಪೌರತ್ವ ಮಸೂದೆ ವಿರುದ್ಧ ಬೃಹತ್ ಸಮಾವೇಶದಲ್ಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಬಳೆ ಕಳುಹಿಸಿಕೊಡೋದಾಗಿ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಬಳೆಗಳನ್ನು ಪ್ರದರ್ಶಿಸಿದ್ದಾರೆ. ನಿಮಗೆ ಅಂಜುವ ಪ್ರಶ್ನೆಯೇ ಇಲ್ಲ ಎಂದಿರುವ ನಾಸೀರ್, ಪೌರತ್ವ ಮಸೂದೆ ಧಿಕ್ಕರಿಸೋದಾಗಿ ಎಚ್ಚರಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಕ ದೊಡ್ಡ ಪುಕ್ಕಲರು ಎಂದು ಲೇವಡಿ ಮಾಡಿರುವ ಜೆಡಿಎಸ್ ಯುವ ನಾಯಕ ನಾಸೀರ್ ಹುಸೇನ್ ಉಸ್ತಾದ್, ತೊಟ್ಟುಕೊಳ್ಳಲು ಬಳೆ ಕಳುಹಿಸೋದಾಗಿ ಬಳೆಗಳನ್ನು ತೋರಿಸಿದ್ದಾರೆ. ಕಲಬುರ್ಗಿಯ ಪೀರ್ ಬಂಗಾಲ್ ಮೈದಾನದಲ್ಲಿ ಆಯೋಜಿಸಿದ್ದ ಪೌರತ್ವ ವಿರೋಧಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ ಮಾಡಿದ ವೇಳೆ ಮಾತನಾಡಿದ ನಾಸೀರ್ ಹುಸೇನ್, ಮೋದಿ ಮತ್ತು ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಸಮಾವೇಶದಲ್ಲಿ ಪೌರತ್ವ ಮಸೂದೆ ಬಗ್ಗೆ ಮುಸ್ಲಿಂರು ಹೆದರಬೇಕಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಅಮಿತ್ ಶಾ ಅವರೇ ನಾವು ಮಸೂದೆಗೆ ಹೆದರಲ್ಲ, ನಿಮಗೂ ಹೆದರಲ್ಲ ಎಂದು ಕಿಡಿಕಾರಿದರು. ನಾವು ಈ ದೇಶದ ನಿವಾಸಿಗಳಿದ್ದೇವೆ. ನಾವು ಯಾರು ಯಾವುದಕ್ಕೂ ಅಂಜೋದಿಲ್ಲ ಎಂದರು.
ಆದರೆ ನೀನೊಬ್ಬ ದೊಡ್ಡ ಅಂಜುಬುರಕ ಇದ್ದೀ. ಅದಕ್ಕಾಗಿ ನಿನಗಾಗಿ ಬಳೆ ಕಳುಹಿಸಿಕೊಡುತ್ತೇವೆ ಎಂದರು.ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಬಳೆ ಕಳುಹಿಸಿಕೊಡ್ತೇವೆ. ಇಬ್ಬರೂ ತೊಟ್ಟುಕೊಂಡು ಆಡಳಿತ ಮಾಡಲಿ ಎಂದು ಬಹಿರಂಗ ಸಮಾವೇಶದಲ್ಲಿ ನಾಸೀರ್ ಹುಸೇನ್ ಬಳೆಗಳನ್ನು ಪ್ರದರ್ಶಿಸಿದರು. ಪೌರತ್ವ ಮಸೂದೆ ವಿರುದ್ಧ ಅಸಹಾಕಾರ ಚಳುವಳಿ ನಡೆಸೋದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights