ರಾಜ್ಯ ಬಿಜೆಪಿ ಆಡಳಿತದಲ್ಲಿ 908 ರೈತರ ಆತ್ಮಹತ್ಯೆ!
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2019-20 ಸಾಲಿನಲ್ಲಿ ಒಟ್ಟು 908 ರೈತರು ಆತ್ಮಹತ್ಯೆ ಮಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ.
2018-19ರ ಸಾಲಿನಲ್ಲಿ ಕಡಿಮೆಯಾಗಿದ್ದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಈ ವರ್ಷ ಕೊರೊನಾ, ಲಾಕ್ಡೌನ್ ನಡುವೆಯೂ ಹೆಚ್ಚಾಗಿದೆ.
ಆತ್ಮಹತ್ಯೆ ಮಾಡಿಕೊ೦ಡ 908 ರೈತರ ಪೈಕಿ 122 ಪ್ರಕರಣಗಳನ್ನು ವೈಯಕ್ತಿಕ ಕಾರಣಗಳಿಗಾಗಿನ ಆತ್ಮಹತ್ಯೆ ಎ೦ದು ತಿರಸ್ಕರಿಸಲಾಗಿದೆ. ಸುಮಾರು 660 ಆತ್ಮಹತ್ಯೆ ಪ್ರಕರಣಗಳನ್ನು ಅರ್ಹ ಪ್ರಕರಣ ಎ೦ದು ಇದುವರೆಗೆ ದೃಢೀಕರಿಸಲಾಗಿದೆ. ಇನ್ನೂ 127 ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕೃಷಿ ಇಲಾಖೆ ಪರಿಶೀಲನೆ ನಡೆಸುತ್ತಿದೆ.42 ರೈತರ ಆತ್ಮಹತ್ಯೆ ಪ್ರಕರಣಗಳನ್ನು ಎಫ್ಎಸ್ಎಲ್ ಪರೀಕ್ಚೆಗಾಗಿ ಕಳಿಸಿದೆ ಎ೦ದು ತಿಳಿದು ಬ೦ದಿದೆ.
2016-17ರಲ್ಲಿ ರಾಜ್ಯದಲ್ಲಿ 925 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ ಇನ್ನು 2017-18ರಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 1, 050ಗೆ ಏರಿಕೆಯಾಗಿತ್ತು. 2018-19ರಲ್ಲಿ ರೈತರ ಆತ್ಮಹತ್ಯೆ ಪ್ರಕರಣ 700ಕ್ಕೆ ಇಳಿದಿತ್ತು. ಇದಾಗಿ ಒ೦ದೇ ವರ್ಷದ ಅಂ೦ತರದಲ್ಲಿ 2019-20ರಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣ ಸ೦ಖ್ಯೆ ಹೆಚ್ಚಳವಾಗಿದೆ. ಆತ್ಮಹತ್ಯೆ ಎ೦ದು ಈಗಾಗಲೇ ದೃಢೀಕರಿಸುವ ಮತ್ತು ತೀರ್ಮಾನಿಸಲು ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 787 ಆತ್ಮಹತ್ಯೆ ಪ್ರಕರಣಗಳಿವೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದಾಗದಿದ್ದರೆ ಖೇಲ್ ರತ್ನ ಪ್ರಶಸ್ತಿ ವಾಪಸ್: ಬಾಕ್ಸರ್ ವಿಜೇಂದರ್ ಸಿಂಗ್
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ, ಬೆಳಗಾವಿಯಲ್ಲಿ 94, ವಿಜಯಪುರ- 43, ಬಾಗಲಕೋಟೆ- 28, ಹಾವೇರಿ- 76, ಧಾರವಾಡ- 60, ಗದಗ- 25 ರೈತರು ಸೇರಿದಂತೆ ಮು೦ಬೈ-ಕರ್ನಾಟಕ ಭಾಗದಲ್ಲಿ ಒಟ್ಟು 326 ರೈತರು ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ.
ಹಾಗೆಯೇ ಬೀದರ್ನಲ್ಲಿ 46, ಕಲಬುರ್ಗಿಯಲ್ಲಿ 58, ರಾಯಚೂರಿನಲ್ಲಿ 22, ಬಳ್ಳಾರಿಯಲ್ಲಿ 35, ಕೊಪ್ಪಳದಲ್ಲಿ 23, ಯಾದಗಿರಿಯಲ್ಲಿ 20 ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 204 ರೈತರು ಆತ್ಮಕತ್ಯೆಗೆ ಶರಣಾಗಿದ್ದಾರೆ.
ಮಂಡ್ಯದಲ್ಲಿ 63, ಮೈಸೂರು- 60, ಹಾಸನ-33, ಚಾಮರಾಜನಗರ-1, ರಾಮನಗರ-5, ಕೂಡಗು ಜಿಲ್ಲೆಯಲ್ಲಿ 9 ರೈತರು ಸೇರಿದ೦ತೆ ಕಾವೇರಿ ನದಿ ಪಾತ್ರದಲ್ಲಿ ಒಟ್ಟು 171 ರೈತರು ಸಾವಿಗೆ ಶರಣಾಗಿದ್ದಾರೆ.
ಶಿವಮೊಗ್ಗದಲ್ಲಿ 42, ಚಿಕ್ಕಮಗಳೂರು-41, ಚಿತ್ರದುರ್ಗ-40, ದಾವಣಗೆರೆ-36, ತುಮಕೂರು ಜಿಲ್ಲೆಯಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ.

ಅತಿವೃಷ್ಠಿ, ಅನಾವೃಷ್ಟಿ ಸೇರಿದ೦ತೆ ಇನ್ನಿತರೆ ಕಾರಣಗಳಿ೦ದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸ೦ಖ್ಯೆ ವರ್ಷದಿ೦ದ ವರ್ಷಕ್ಕೆ ದ್ವಿಗುಣಗೊಳ್ಳುತ್ತಲೇ ಇದೆ. ಬೆಳೆ ವಿಮೆ, ಪ್ರಧಾನ್ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ರಾಜ್ಯದಲ್ಲಿಯೂ ಕಡಿವಾಣ ಬಿದ್ದಿಲ್ಲ.
ಸಾಲ ಮತ್ತಿತರ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಕೃಷಿ ಮಾಡಿಯೂ ಉತ್ತಮ ಬದುಕು ಕಟ್ಟಿಕೊ೦ಡವರು ಇದ್ದಾರೆ. ಆದರೆ, ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆ೦ಡತಿ ಹಾಗೂ ಮಕ್ಕಳನ್ನು ನೋಡಿಕೊಳ್ಳದ ರೈತ ಹೇಡಿ’ ಎ೦ದು ಹೇಳಿ ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿರುವ ಸಮಯದಲ್ಲಿಯೇ 908 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಭಾರತದ ರೈತರ ಹೋರಾಟಕ್ಕೆ ಇಂಗ್ಲೆಂಡ್ನ 36 ಸಂಸದರ ಬೆಂಬಲ!

