ಮುಂಬೈ ಕೋವಿಡ್ ಕೇಂದ್ರದಲ್ಲಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್..!

ಮುಂಬೈ ಕೋವಿಡ್ ಕೇಂದ್ರದಲ್ಲಿ ಎಣ್ಣೆ ಪಾರ್ಟಿಯ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಮುಂಬೈನ ಹೊರವಲಯದಲ್ಲಿರುವ ಕಲ್ಯಾಣ್-ಡೊಂಬಿವಾಲಿಯ ಕೋವಿಡ್ ಕೇಂದ್ರವೊಂದರಲ್ಲಿ ನಡೆದ ಪಾರ್ಟಿಯ ವಿಡಿಯೋ ವೈರಲ್ ಆಗಿದೆ.

ಕೊರೋವೈರಸ್ ಪ್ರಕರಣಗಳು ನಗರದಲ್ಲಿ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಕೋವಿಡ್ ಕೇಂದ್ರದ ಸಿಬ್ಬಂದಿ ಮುಂಬೈ ಬಳಿಯ ಕೊರೊನಾ ಸೌಲಭ್ಯದಲ್ಲಿ ಆಲ್ಕೋಹಾಲ್ ಪಾರ್ಟಿ ಆಯೋಜಿಸಿದ್ದು ಕೆಂಗಣ್ಣಿಗೆ ಗುರಿಯಾಗಿದೆ.

ಇತ್ತೀಚಿಗೆ ಕೋವಿಡ್ 2ನೇ ಅಲೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮಹಾರಾಷ್ಟ್ರದಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಹೀಗಿರುವಾಗ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಸವಲಾರಾಮ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಕೋವಿಡ್ ಕೇಂದ್ರದಲ್ಲಿ ಪಾರ್ಟಿ ಮಾಡಲಾಗಿದೆ. ಕಲ್ಯಾಣ್-ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಶನ್‌ನ (ಕೆಡಿಎಂಸಿ) ಆರೋಗ್ಯ ಇಲಾಖೆ ಸೌಲಭ್ಯದಲ್ಲಿರುವ ಗುತ್ತಿಗೆದಾರನಿಗೆ ಘಟನೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಸೂಚಿಸಿ ಎಚ್ಚರಿಕೆ ನೀಡಿದೆ.

ದಾರಿಹೋಕರೊಬ್ಬರು ಪಾರ್ಟಿಯನ್ನು ರೆಕಾರ್ಡ್ ಮಾಡಿದ ನಂತರ ವೀಡಿಯೊ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ನಂತರ ಸ್ಥಳೀಯ ನಾಗರಿಕ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ಎದುರಿಸಬೇಕಾಯಿತು.

“ನಾವು ಅದರಲ್ಲಿ ತೊಡಗಿರುವ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದೇವೆ. ಉಳಿದವರು ಆಸ್ಪತ್ರೆಯ ಹೊರಗಿನವರು ”ಎಂದು ಕ್ಲಿನಿಕ್ ನಿರ್ದೇಶಕ ಡಾ.ರಾಹುಲ್ ಗುಲಾಮ್ ಹೇಳಿದರು.

ಕೋವಿಡ್ ಕೇಂದ್ರದಲ್ಲಿ ದಿನವಿಡೀ ಅನೇಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರಿಂದ, ಅದರ ಪಕ್ಕದಲ್ಲಿ ಟೆಂಟ್ ಸ್ಥಾಪಿಸಲಾಯಿತು. ಸಿಬ್ಬಂದಿ ಆಫ್ ಡ್ಯೂಟಿಯಲ್ಲಿದ್ದಾಗ ಈ ಘಟನೆ ನಡೆದಿದೆ.

ಕಲ್ಯಾಣ್-ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ ಕರೋನವೈರಸ್ ರೋಗಿಗಳ ಸಂಖ್ಯೆ 75,000 ಕ್ಕೆ ಏರಿದೆ. ಪ್ರಸ್ತುತ, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ಪುರಸಭೆ ಮತ್ತು ಸ್ಥಳೀಯರಿಗೆ ಆತಂಕದ ವಿಷಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights