Bigg Boss : ಟಾಸ್ಕ್ ವೇಳೆ ಹಲ್ಲು ಮುರಿದುಕೊಂಡ ಲ್ಯಾಗ್ ಮಂಜ…!

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ದುರ್ಘಟನೆ ಸಂಭವಿಸಿದೆ. ನಿನ್ನೆ ನೀಡಿದ ಇಟ್ಟಿಗೆ ಸಂಗ್ರಹದ ಆಟದಲ್ಲಿ ಲ್ಯಾಗ್ ಮಂಜನ ಹಲ್ಲು ಮುರುದಿದೆ.

ಹೌದು…. ಈಗಾಗಲೇ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಾಗಿಸಲಾಗಿದೆ. ಈ ಎರಡು ತಂಡಗಳಿಗೆ ಬಿಗ್ ಬಾಸ್ ಟಾಸ್ಕ್ ವೊಂದನ್ನ ನೀಡಿದ್ದರು. ಈ ಟಾಸ್ಕ್ ನಲ್ಲಿ ಅತೀ ಹೆಚ್ಚು ಇಟ್ಟಿಗೆಗಳನ್ನು ಸಂಗ್ರಹಿಸಿ ಅವುಗಳಿಂದ ಗೋಪುರ ಕಟ್ಟಬೇಕು. ಮಾತ್ರವಲ್ಲದೇ ಸಂಗ್ರಹಿಸಿದ ಇಟ್ಟಿಗೆಗಳನ್ನು ಕಾಪಾಡಿಕೊಳ್ಳಬೇಕು. ಒಂದು ತಂಡ ಸಂಗ್ರಹಿಸಿದ ಇಟ್ಟಿಗೆಗಳನ್ನು ಇನ್ನೊಂದು ತಂಡ ಕಿತ್ತುಕೊಳ್ಳಬಹುದು.

ಈ ಆಟದಲ್ಲಿ ಇಟ್ಟಿಗೆಯನ್ನು ಕಾಪಾಡುವ, ಕಿತ್ತುಕೊಳ್ಳುವ ವೇಳೆ ಲ್ಯಾಗ್ ಮಂಜನಿಗೆ ಮತ್ತೊಬ್ಬ ಸ್ಪರ್ಧಿ ರಾಜೀವ್ ಕೈ ತಾಗಿದ್ದರಿಂದ ಲ್ಯಾಗ್ ಮಂಜನ ಹಲ್ಲು ಮುರಿದು ಹೋಗಿದೆ. ಜೊತೆಗೆ ರಾಜೀವ್ ಕೈಗೂ ಪೆಟ್ಟಾಗಿತ್ತು. ಇಷ್ಟಾದರೂ ಆಟ ಮುಂದುವರೆಸಿದ ಲ್ಯಾಗ್ ಮಂಜ ಹಾಗೂ ರಾಜೀವ್ ಉತ್ತಮ ಪ್ರದರ್ಶನ ನೀಡಿದರು.

ಇಟ್ಟಿಗೆ ಸಂಗ್ರಹದ ಬಳಿಕ ದಾರ ಸುತ್ತುವ ಟಾಸ್ಕ್ ನಲ್ಲಿ ಲ್ಯಾಗ ಮಂಜ ಹಾಗೂ ರಾಜೀವ್ ಅತ್ಯತ್ತಮವಾಗಿ ಆಡಿದರು. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೈ-ಕಾಲು ತಲೆಗೆ ಪೆಟ್ಟಾಗಿರುವುದನ್ನ ನಾವು ನೋಡಿದ್ದೆವು ಆದರೆ ಹಲ್ಲು ಮುರಿದಿದ್ದು ಇದೇ ಮೊದಲ ಬಾರಿಗೆ. ಆದರೂ ಲ್ಯಾಗ್ ಮಂಜ ಮುಂದುವರೆದು ಅತ್ಯುತ್ತಮ ಆಟವಾಡಿದ್ದು ಮಾತ್ರ ಬಿಗ್ ಬಾಸ್ ನೋಡುಗರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights