ಯುವತಿ ಹೇಳಿಕೆ ಬೆನ್ನಲ್ಲೆ ಸಾಹುಕಾರನಿಗೆ ಢವಢವ : ಬಂಧನದ ಭೀತಿಯಲ್ಲಿ ರಮೇಶ್?

ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಇಂದು ಕೂಡ ಮುಂದುವರೆಯಲಿದೆ.

ರಮೇಶ್ ರಾಸಲೀಲೆ ಸಿಡಿ ಬಿಡುಗಡೆಯಾಗಿ 27 ದಿನ ಕಳೆದರೂ ಸಿಡಿ ಲೇಡಿ ಪತ್ತೆಯಾಗಿರಲಿಲ್ಲ. ಆದರೆ ಸಿನಿಮಾ ರೀತಿಯಲ್ಲಿ ಕೋರ್ಟ್ ಗೆ ಹಾಜರಾದ ಯುವತಿ ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಲೇಡಿ ಬರುತ್ತಿದ್ದಂತೆ ಸಿಡಿ ಕೇಸ್ ಗೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ.

ಮಾತ್ರವಲ್ಲದೇ ಎಸ್ಐಟಿ ಮುಂದೆ ಹಲವಾರು ವಿಚಾರಗಳನ್ನು ಯುವತಿ ಹೇಳಿಕೊಂಡಿದ್ದಾಳೆ. ಯುವತಿ ಹೇಳಿಕೆ ರಮೇಶ್ ಜಾರಕಿಹೊಳಿ ಬಿಗಿಯಾಗುತ್ತಿದ್ದು ಬಂಧನದ ಭೀತಿ ಶುರುವಾಗಿದೆ ಎನ್ನಲಾಗುತ್ತಿದೆ.

ಸಿಡಿ ಲೇಡಿಗೆ ಪದೇ ಪದೇ ಕಾಲ್ ಮಾಡ್ತಾಯಿದ್ದ ಸಾಹುಕಾರ್ ಕಾಲ್ ಲಿಸ್ಟ್, ರಮೇಶ್ ಕೊಟ್ಟ ಗಿಫ್ಟ್, ವಿಡಿಯೋ ಕಾಲ್ ಲಿಸ್ಟ್ ಗಳನ್ನು ಸಾಕ್ಷಿಯಾಗಿ ಯುವತಿ ಎಸ್ಐಟಿಗೆ ಕೊಟ್ಟಿದ್ದಾಳೆ. 300 ಪುಟಗಳ ಚಾಟ್ ಹಿಸ್ಟ್ರಿ ಇದೆ ಎಂದು ಹೇಳಲಾಗುತ್ತಿದೆ. ಇದೆಲ್ಲವೂ ಸಾಹುಕಾರನಿಗೆ ಬಂಧನದ ಭೀತಿ ಹುಟ್ಟಿಸಿವೆ. ಇಂದು ಕೂಡ 10 ಗಂಟೆಗೆ ಯುವತಿ ಎಸ್ಐಟಿ ವಿಚಾರಣೆಗೆ ಹಾಜರಾಗಲಿದ್ದಾಳೆ. ನಂತರ ವೈದ್ಯಕೀಯ ಪರೀಕ್ಷೆಗೆ ಆಕೆಯನ್ನು ಒಳಪಡಿಸಲಾಗುತ್ತದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights