ಪ್ರವಾಹಕ್ಕೆ ಸೆಡ್ಡುಹೊಡೆದು ಸ್ವಾವಲಂಬಿ ಬದುಕು ಸಾಗುತ್ತಿರುವ ಮಹಿಳಾ ಮಣಿಗಳು…

ಇಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ. ಹಲವು ಮಹಿಳೆಯರ ಸಾಧನೆಗಳನ್ನು ಗುರುತ್ತಿಸೋದು, ಮಹಿಳಾ ಹಕ್ಕುಗಳ ಬಗ್ಗೆ ಧ್ವನಿ ಮಾಡೋದು ಕಾಮನ್. ಆದ್ರೆ ಈ ಮಹಿಳೆಯರು ಪ್ರವಾಹದಲ್ಲಿ ತಮ್ಮ ಮನೆಮಠಗಳನ್ನು ಕಳೆದುಕೊಂಡ್ರು ಅದೆಲ್ಲವನ್ನೂ ಮೆಟ್ಟಿನಿಂತು, ಸ್ವಂತ ಉದ್ಯೋಗ ಆರಂಭಿಸಿ, ಇದೀಗ ಸ್ವಾಲಂಭಿ ಬದುಕು ನಡೆಸುತ್ತಿದ್ದಾರೆ. ಆ ಮಹಿಳೆಯರ ಯಶೋಗಾಥೆಯನ್ನು ನೀವು ನೋಡ್ಲೆಬೇಕು.

ಅದು ಯಾವ ಕಾಲಕ್ಕೂ ಕೇಳಿ ಕಂಡರಿಯ ಪ್ರವಾಹ. ಅದು ಅಂತಿಂಥ ಪ್ರವಾಹ ಅಲ್ಲಾ ಕೋಟಿ ಕೋಟಿ ಆಸ್ತಿಪಾಸ್ತಿ, ನೂರಾರು ಜನ, ಸಾವಿರಾರು ಜಾನುವಾರ, ಪ್ರಾಣಿ, ಪಕ್ಷಿಗಳನ್ನ ಬಲಿಪಡೆದ ಪ್ರವಾಹ. ನೂರಾರು ಜನ ಮನೆ ಮಠ ಕಳೆದುಕೊಂಡು ಬೀದಿಗೆ ತಂದು ನಿಲ್ಲಿಸಿದ ಪ್ರವಾಹ. ಇಂಥಹ ಪ್ರವಾಹಕ್ಕೆ ಇಡೀ ರಾಜ್ಯವೇ ನಲುಗಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಹೊಸ ಜೀವನ ಕಟ್ಟಿಕೊಳ್ಳುವುದಿರಲಿ ಜನ ಒಂದು ಹೊತ್ತಿನ ಊಟಕ್ಕೂ ಪರಿದಾಡುವಂತ ಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು. ಈ ಕೆಟ್ಟ ಗಳಿಗೆಯನ್ನ ಜನ ಮತ್ತೆ ನೆನೆದುಕೊಳ್ಳಲು ಬೆವರಿ ಹೋಗುವಂತಹ ಸಂದರ್ಭ ಅದು. ಎಂಥವರೂ ಕೂಡ ಜೀವನ ಸಾಗಿಸಲು ಆಗದೇ ಕೈ ಚೆಲ್ಲಿ ಕೂಡುವಂತಹ ಸಂದರ್ಭ. ಈ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿದ್ದು ಕೊಡಗಿನ ಮಹಿಳೆಯರು.

ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಆದ ಭೂಕುಸಿತ, 2019ರಲ್ಲಿ ಆದ ಪ್ರವಾಹಕ್ಕೆ ಹೆದರಿ ಊರು ತೊರೆಯದ ಮಹಿಳೆಯರು ಭೂಕುಸಿತ ಪ್ರವಾಹಕ್ಕೆ ಸೆಡ್ಡುಹೊಡೆದು ಸ್ವಉದ್ಯೋಗ ಆರಂಭಿಸಿ ಇದೀಗ ಯಶಸ್ವಿ ಉದ್ಯಮಿಗಳಾಗುವತ್ತಾ ಹೆಜ್ಜೆ ಹಿಡುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿರುವ ಕಾಲೂರಿನಲ್ಲಿ ಅತೀ ಹೆಚ್ಚು ಭೂಕುಸಿತ ಸಂಭವಿಸಿ, ಬಹುತೇಕ ಕುಟುಂಬಗಳು ಎಲ್ಲವನ್ನು ಕಳೆದುಕೊಂಡಿದ್ದವು. ಹೀಗಾಗಿ ಮಹಿಳೆಯರಂತು ಮಾನಸಿಕವಾಗಿ ಸಂಪೂರ್ಣ ಜರ್ಜರಿತವಾಗಿದ್ರು. ಮಾನಸಿಕವಾಗಿ ಕುಗ್ಗಿಹೋಗಿದ್ದ ಮಹಿಳೆಯರಿಗೆ ಬೆನ್ನೆಲುಬಾಗಿ ನಿಂತಿದ್ದು, ಭಾರತೀಯ ವಿದ್ಯಾಭವನ ಸಂಸ್ಥೆ.

ಆರಂಭದಲ್ಲಿ ಈ ಮಹಿಳೆಯರಿಗೆ ಕಾಲೂರಿನ ಸರ್ಕಾರಿ ಶಾಲೆಯಲ್ಲಿ ಮಸಾಲೆ ಪದಾರ್ಥಗಳ ತಯಾರಿಕೆಗೆ ಸಂಬಂಧಿಸಿ ತರಬೇತಿ ನೀಡಲಾಗಿತ್ತು. ಆದ್ರೀಗ ದಾನಿಗಳ ನೆರವಿನಿಂದ ಒಂದುವರೆಗೆ ಕೋಟಿ ರೂಪಾಯಿಯಲ್ಲಿ ದೊಡ್ಡ ಉದ್ಯಮವೇ ಆರಂಭವಾಗಿದೆ. ಪ್ರವಾಹ, ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಮಹಿಳೆರು ಈಗ ಸಾಂಬಾರ್ ಪೌಡರ್, ರಸಂಪೌಡರ್, ಕೊಡಗಿನ ಪ್ರಸಿದ್ಧ ಪಂದಿಕರಿ ಮಸಾಲೆಗಳನ್ನು ತಯಾರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಹೋಂಮೇಡ್ ಚಾಕೋಲೆಟ್, ಕಡಲೆ, ಎಳ್ಳು ಬರ್ಫಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದಾರೆ. ಆ ಮೂಲಕ ಸ್ವಾಲಂಬಿ ಬದುಕು ನಡೆಸುತ್ತಾ ಮಾದರಿ ಮಹಿಳೆಯರಾಗಿ ರೂಪುಗೊಂಡಿದ್ದಾರೆ.

ಆರಂಭದಲ್ಲಿ ಮಸಾಲ ಪದಾರ್ಥಗಳನ್ನು ತಯಾರಿಸುತ್ತಿದ್ದ ಮಹಿಳೆಯರು ಇದೀಗ ಚಾಕೊಲೆಟ್, ಬರ್ಫಿಗಳನ್ನು ತಯಾರಿಸುತ್ತಿದ್ದಾರೆ. ಅವುಗಳು ಇದೀಗ ಆನ್‍ಲೈನ್ ಮೂಲಕವೂ ಮಾರುಕಟ್ಟೆ ರೂಪಿಸಿಕೊಂಡಿವೆ. ಅಲ್ಲದೆ ಪ್ರವಾಹ ಭೂಕುಸಿತದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳ ಮಹಿಳೆಯರಿಗೆ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿ ನೀಡುತ್ತಿರುವವರು ಮನೆಯನ್ನು ಕಳೆದುಕೊಂಡ ಸಂತ್ರಸ್ಥೆ ಎನ್ನೋದು ವಿಶೇಷ. ಟೈಲರಿಂಗ್ ತರಬೇತಿ ಪಡೆದ ಮಹಿಳೆಯರು ಇದೀಗ ಶಾಲಾ ಕಾಲೇಜುಗಳ ಸಮವಸ್ತ್ರಗಳನ್ನು ಹೊಲೆಯುವುದಕ್ಕೂ ಗುತ್ತಿಗೆ ಪಡೆದು ಸಾವಿರಾರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊಲೆಯುತ್ತಿದ್ದಾರೆ.

ಒಟ್ಟು 30 ಮಹಿಳೆಯರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಎಲ್ಲಾ ವಹಿವಾಟುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭೂಕುಸಿತಕ್ಕೂ ಮುಂಚೆ ಕೇವಲ ಕೃಷಿಚಟುವಟಿಕೆ ಮಾಡಿಕೊಂಡಿದ್ದ ಮಹಿಳೆಯರು ಇದೀಗ ತಂತ್ರಜ್ಞಾನಕ್ಕೆ ತೆರೆದುಕೊಂಡು, ತಮ್ಮದೇ ಪುಟ್ಟ ಕೈಗಾರಿಕೆಯಲ್ಲಿ ಸ್ವಾಲಂಬಿ ಬದುಕು ನಡೆಸುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಮಾನಸಿಕ ಸ್ಥೈರ್ಯ ಬೆಳೆಸಿಕೊಂಡು ಇತರೆ ಮಹಿಳೆಯರಿಗಿಂತ ಮಾದರಿಯಾಗಿ ಬದುಕುತ್ತಿದ್ದಾರೆ ಎನ್ನುತ್ತಾರೆ ಬೆನ್ನೆಲುಬಾಗಿ ನಿಂತಿರುವ ಬಾಲಾಜಿ ಕಶ್ಯಪ್.

ಒಟ್ಟಿನಲ್ಲಿ ಪ್ರವಾಹ, ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆಯರು ಅದೇ ಜಾಗದಲ್ಲಿ ಮತ್ತೆ ಗಟ್ಟಿಯಾಗಿ ನಿಂತು ಸ್ವಂತ ಉದ್ಯೋಗ ಆರಂಭಿಸಿ ಗಟ್ಟಿಗಿತ್ತಿಯರಾಗಿದ್ದಾರೆ. ಅವರಿಗೆ ನಮ್ಮದೊಂದು ಸಲಾಮ್.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights