ಬಡಕುಟುಂಬಗಳಿಗೆ ಔಷಧಿ ವಿತರಿಸೋ ಕಾರ್ಯದಲ್ಲಿ ಧೂದ್ಪೇಡ ದಿಗಂತ್!
ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಅದೇಷ್ಟೋ ಜನರಿಗೆ ಚಿಕಿತ್ಸೆ ಹಾಗೂ ಔಷಧಿಗಳ ಖರೀದಿ ಅಷ್ಟು ಸುಲಭವಾಗುತ್ತಿಲ್ಲ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಮೆಡಿಷನ್ ತೆಗೆದುಕೊಳ್ಳುವುದು ಕೈಗೆಟಕದ ಮಾತು. ಹೀಗಾಗಿ ನಟ ದಿಗಂತ್ ಕಷ್ಟದಲ್ಲಿರುವವರಿಗೆ ಔಷಧಿ ವಿತರಿಸೋ ಕಾರ್ಯದಲ್ಲಿ ತೊಡಗಿದ್ದಾರೆ.
ಎಸ್… ಕೊರೊನಾ ವೈಸರ್ ಹರಡುವ ಲಕ್ಷಣಗಳು ಕಾಣಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ 3 ರಿಂದ ಮೇ 17ರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಹೀಗಾಗಿ ಬಡಕುಟುಂಬಗಳಿಗೆ ಭಾರೀ ಅನಾನುಕೂಲಗಳಾಗಿವೆ. ಎಲ್ಲೆಡೆ ಲಾಕ್ಡೌನ್ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಒಂದೊತ್ತಿನ ಊಟಕ್ಕಾಗಿ ದಿನಗೂಲಿ ಮಾಡುತ್ತಿದ್ದ ಕುಟುಂಬಗಳು ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಇದೇ ಹೊತ್ತಿನಲ್ಲಿ ಬಡ ಜನರ ನೆರವಿಗೆ ನಿಂತಿದ್ದಾರೆ ಸ್ಯಾಂಡಲ್ವುಡ್ ನಟ ಧೂದ್ಪೇಡ ದಿಗಂತ್. ದಿಗಂತ್ ಅವರು ನೊಂದ ರೋಗಿಗಳ ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡುವ ವಿನೂತನ ಕಾರ್ಯ ಮಾಡುತ್ತಿದ್ದಾರೆ.
ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೆ ಬೈಕ್ಗಳ ಮೂಲಕ ತೆರಳಿ ಅಗತ್ಯವಿರುವವರಿಗೆ ಔಷಧಿಯ ನೆರವು ನೀಡುತ್ತಿದ್ದಾರೆ.ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ನೇತ್ರತ್ವದಲ್ಲಿ ಯತೀಶ್ ಮತ್ತು ದಿಗಂತ್ ನೇತ್ರತ್ವದ ತಂಡ ಈ ಮಹತ್ವದ ಕಾರ್ಯಕ್ಕೆ ಕೈಹಾಕಿದೆ.


