ಬಿಎಂಟಿಸಿಯಲ್ಲಿ ಮರೆಯಾದ ಸಾಮಾಜಿಕ ಅಂತರ : ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸಂಚಾರ

ಕೊರೊನಾ ಲಾಕ್ ಡೌನ್ 4.0 ಸಡಿಲಗೊಂಡು ಕೆಲ ದಿನಗಳ ಬಳಿಕ ಬಿಎಂಟಿಸಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಮರೆಯಾಗುತ್ತಿರುವುದು, ಸೋಂಕು ಹರಡುವ ಭೀತಿ ಹೆಚ್ಚಾತ್ತಿದೆ.

ಹೌದು… ಇತ್ತೀಚೆಗೆ ಮನೆಬಿಟ್ಟು ಹೊರಬರುವ ಜನರಿಗೆ ಕೊರೊನಾ ಸೋಂಕು ಹರಡುವ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಮಾರುಕಟ್ಟೆಗಳಲ್ಲಿ, ರಸ್ತೆಗಳಲ್ಲಿ, ಪಾರ್ಕ್ ಗಳಲ್ಲಿ ಕೆಲ ಮಂದಿ ಗುಂಪು ಗುಂಪಾಗಿ ಸೇರುವುದು ಕಂಡಬರುತ್ತಿದೆ. ಇದೇ ರೀತಿ ಬಸ್ ಗಳಲ್ಲೂ ಕಂಡು ಬರುತ್ತಿದೆ. ಜನ ಸಾಮಾಜಿಕ ಅಂತರವಿಲ್ಲದೇ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ. ಕೆಲ ಬಸ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಮಾತ್ರವಲ್ಲದೇ ಬಸ್ ಹತ್ತುವಾಗ ಮತ್ತ ಇಳಿಯುವಾಗ ಗುಂಪಾಗುವುದು ಕಂಡು ಬರುತ್ತಿದೆ.

ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದೇ 30 ಜನ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕಂಡಕ್ಟರ್ ಜೊತೆ ಅಂತರ ಕಾಯ್ದುಕೊಳ್ಳಲು ಪಾಸ್ ಕಡ್ಡಾಯ ಮಾಡಿ ಟಿಕೇಟ್ ರಹಿತ ಪ್ರಯಾಣಕ್ಕೆ ಸೂಚಿಸಲಾಗಿದೆ. ಮಾಸ್ಕ್ ಗಳನ್ನು ಧರಿಸಿರಬೇಕು. ಹೀಗಿದ್ದರು ಜನ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹತ್ತುತ್ತಿರುವುದು ಕಂಡು ಬರುತ್ತಿದೆ. ಸೀಟ್ ಗಳಲ್ಲೂ ಜೊತೆಯಾಗಿ ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಶುಕ್ರವಾರ ಬೆಳಿಗ್ಗೆ  ಬಿಎಂಟಿಸಿ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ನಿಲ್ದಾಣದಿಂದ ತೆರಳಿದ ಕೆಲ ಬಸ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸಂಚರಿಸಿರುವುದು ಕಂಡು ಬಂದಿದೆ.

ಪ್ರಯಾಣಿಕರಿಗೆ ಥರ್ಮಲ್‌ಸ್ಕ್ರೀನಿಂಗ್‌ ಸಹ ಮಾಡುತ್ತಿರಲಿಲ್ಲ. ಶುಕ್ರವಾದ ಅತ್ಯಂತ ವಿರಳ ಸಂಖ್ಯೆಯಲ್ಲಿ ಜನ ಇದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತಿತ್ತು. ಬಿಎಂಟಿಸಿ ನಿಗಮವು ಗುರುವಾರ 1,350 ಬಸ್‌ ಕಾರ್ಯಾಚರಣೆ ಮಾಡಿದ್ದು, 67,400 ಪಾಸ್‌ ಮಾರಾಟ ಮಾಡಿದೆ. ಇದರಿಂದ 77 ಲಕ್ಷ ಆದಾಯ ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights