ಬೆಂಗಳೂರಿನಲ್ಲಿ ತಂಪೆರೆದ ವರುಣ : ಇಂದು ನಾಳೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಲಾಕ್ ಡೌನ್ ನಡುವೆ ರಾಜ್ಯದಲ್ಲಿ ಮಳೆರಾಯ ಭೂಮಿಗೆ ತಂಪೆರೆದಿದ್ದು, ಬೇಸಿಗೆ ಬಿಸಿ ತಾಳದ ಜನರಲ್ಲಿ ಮಂದಹಾಸ ಮೂಡಿದೆ. ಗುರುವಾರ ರಾತ್ರಿ ಬೆಂಗಲೂರಿನಲ್ಲಿ ಕೋಮಚ ಮಟ್ಟಗೆ ಮಳೆಯಾಗಿತ್ತು. ಆದರೆ ಇಂದು ಮುಂಜಾನೆ 6.30 ಸುಮಾರಿಗೆ ಭಾರಿ ಮಳೆಯಾಗಿದೆ. ಇದೇ ಹವಾಮಾನ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೆಳಿದೆ.

ಇಂದು ಮತ್ತು ನಾಳೆ ರಾಜ್ಯಾದ್ಯಂತ ಭಾರಿ ಮಳೆಯಾಗಲಿದ್ದು ಭಾನುವಾರ ಮಳೆಯ ಅಬ್ಬರ ಕೊಂಚ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಇನ್ನು, ದಕ್ಷಿಣ ಕರ್ನಾಟಕದ ಭಾಗದಲ್ಲಿ ಭಾರೀ ಮಳೆ ಆಗಲಿದೆಯಂತೆ. ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಭಾಗದ ಜನತೆಗೆ ಈಗಾಗಲೇ ಹವಾಮಾನ ಇಲಾಖೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ನಗರದಲ್ಲಿ ರಾತ್ರಿ ಇಡೀ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಮುಂಜಾನೆ ಜೋರಾಗಿದೆ. ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ.

ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಗುಡು-ಮಿಂಚು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಚಿಕ್ಕದಾಗಿ ಮಳೆ ಸುರಿದಿತ್ತು. ಬೆಳಗ್ಗೆ 6.30ರ ಸುಮಾರಿಗೆ ಮಳೆ ರೌದ್ರ ನರ್ತನ ಆರಂಭಿಸಿತ್ತು.  ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಿದೆ. ಮುಂಜಾನೆ ಹಾಲು-ಮೊಸರು ಇತ್ಯಾದಿ ಅಗತ್ಯ ವಸ್ತುಗಳನ್ನು ತರಲು ಜನರು ಹೊರ ನಡೆದಿದ್ದರು. ಈ ವೇಳೆ ಮಳೆಯಿಂದ ಅನೇಕರು ಪರದಾಡಿದರು. ಇನ್ನು, ಬಹುತೇಕ ಸಂಸ್ಥೆಗಳಿಗೆ ವರ್ಕ್​ ಫ್ರಮ್​ ಹೋಮ್​ ನೀಡಿವೆ. ಹೀಗಾಗಿ, ಈ ಮಳೆಯಿಂದ ಅಷ್ಟಾಗಿ ತೊಂದರೆ ಉಂಟಾಗಿಲ್ಲ. ಭಾರೀ ಮಳೆಯಿಂದಾಗಿ ಮೋರಿಗಳು ಉಕ್ಕಿ ರಸ್ತೆಯ ಮೇಲೆಲ್ಲ ನೀರು ತುಂಬಿದ ದೃಶ್ಯಗಳು ಬಹತೇಕ ಕಡೆಗಳಲ್ಲಿ ಕಂಡು ಬಂತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

ಗಾಳಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಒಣಗಿದ ಮರಗಳು ಬೀಳುವ ಸಾಧ್ಯತೆ ಇದೆ. ಜೊತೆಗೆ ಈಗಾಗಲೇ ಅಲ್ಲಲ್ಲಿ ರಸ್ತೆಗಳು ಬ್ಲಾಕ್ ಆಗಿವೆ. ಕೊರೊನಾ ಹೋರಾಟದ ನಡುವೆ, ಬಿಬಿಎಂಪಿ ಮಳೆ ಮುನ್ನೆಚ್ಚರಿಕೆ, ರಸ್ತೆಗಳಲ್ಲಿ ನೀರು ತೆರವಿಗೂ ಮುಂದಾಗಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights