ಮಂಗಳ ಗ್ರಹದಲ್ಲಿ ನಿಮ್ಮ ಮನೆಯಿದ್ರೆ ನನ್ನ ಅಲ್ಲಿ ಬಿಡಿ – ಮೋದಿಜಿಗೆ ರಾಖಿ ಮನವಿ
ಇಡೀ ದೇಶವೇ ಕೊರೊನಾಗೆ ಬೆಚ್ಚಿಬಿದ್ದಿದೆ. ದೇಶದೆಲ್ಲೆಡೆ ಮೇ.3 ರವರೆಗೆ ಲಾಕ್ ಡೌನ್ ಮುಂದುವರೆಸಲಾಗಿದೆ. ಹೀಗಾಗಿ ಮನೆಯಲ್ಲೇ ಇರುವ ಜನರಿಗೆ ಇದು ಕಿರಿಕಿರಿಯನ್ನುಂಟು ಮಾಡಿದೆ. ಇದಕ್ಕೆ ಬಾಲಿವುಡ್ ನ ವಿವಾದಿತ ನಟಿ ರಾಖಿ ಸಾವಂತ್ ಕೂಡ ಹೊರತಾಗಿಲ್ಲ. ಲಾಕ್ ಡೌನ್ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಖಿ ಪ್ರಧಾನಿ ಮೋದಿಯವರಲ್ಲಿ ತನ್ನ ಪತಿಯ ಮನೆಗೆ ಕಳುಹಿಸಿಕೊಡಲು ಮನವಿ ಮಾಡಿದ್ದಾರೆ.
ಹೌದು… ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಲಾಕ್ ಡೌನ್ ಆದ ರಾಖಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಶೇರ್ ಮಾಡಿದ ರಾಖಿ “ಜನ ಮನೆಬಿಟ್ಟು ಹೊರಹೋಗುತ್ತಿದ್ದಾರೆ. ಆದರೆ ನಾವು ಮಾತ್ರ ಭಯದಿಂದ ಮನೆಯಿಂದ ಹೊರಬರುತ್ತಿಲ್ಲ. ನಾನು ನಿಮ್ಮ ಬಹುದೊಡ್ಡ ಫ್ಯಾನ್ ಹೀಗಾಗಿ ತಾವುಗಳು ನನಗೆ ನಿಮ್ಮ ಹೆಲಿಕ್ಯಾಪ್ಟರ್ ನಲ್ಲಿ ಗಂಡನ ಊರಿಗೆ ಕಳುಹಿಸಿಕೊಡಿ” ಎಂದು ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲಾ ” ತಮಗಿನ್ನು ಮಕ್ಕಳಾಗಿಲ್ಲ. ಕೆಲವು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದೇವೆ. ಹೀಗಾಗಿ ತಮ್ಮ ಗಂಡನ ಬಳಿ ತಮ್ಮನ್ನ ಮೋದಿಯವರ ಫ್ಲೈಟ್ ಅಲ್ಲಿ ಕಳುಹಿಸಿ ಕೊಡುವಂತೆ” ರಾಖಿ ಮೋದಿ ಅವರ ಬಳಿ ಮನವಿ ಮಾಡಿದ್ದಾರೆ. ಜೊತೆಗೆ ಮಂಗಳ ಗ್ರಹದಲ್ಲಿ ನಿಮ್ಮ ಮನೆಯಿದ್ರೆ ನನ್ನ ಅಲ್ಲಿ ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ರಾಖಿ ಸಾವಂತ್ 2019ರ ಜುಲೈ 28ರಂದು ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಖಿ ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.
ರಾಖಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾವಿರಾರು ಜನ ಈ ವಿಡಿಯೋವನ್ನು ನೋಡಿದ್ದಾರೆ. ಕೆಲವರು ರಾಖಿಗೆ ಜೈಕಾರ ಹಾಕಿದ್ರೆ, ಇನ್ನೂ ಕೆಲವರು ವಿಡಿಯೋ ನೋಡಿ ಮೌನ ತಾಳಿದ್ದಾರೆ. ಇನ್ನೂ ಕೆಲವರು ಮತ್ತೊಂದಿಷ್ಟು ಜನರಿಗೆ ಶೇರ್ ಮಾಡಿದ್ದಾರೆ.
https://www.youtube.com/watch?v=HzMzoi4rXac