ಮಂಡ್ಯದಲ್ಲಿ ಸೆಲೂನ್, ಬೇಕರಿ ಓಪನ್ – ಅನುಮತಿ ಕೊಟ್ಟ ಜಿಲ್ಲಾಡಳಿತ : ಜನರಲ್ಲಿ ಹೆಚ್ಚಿದ ಆತಂಕ
ರಾಜ್ಯದಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ಸಕ್ಕರೆ ನಾಡು ಮಂಡ್ಯದಲ್ಲಿ ಸೆಲೂನ್ ಹಾಗೂ ಬೇಕರಿ ಓಪನ್ ಮಾಡಲಾಗಿದ್ದು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.
ಹೌದು.. ಮಂಡ್ಯದಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಮೈಸೂರಿನಲ್ಲಿ 21 ಪ್ರಕರಣಗಳುಪತ್ತೆಯಾಗಿವೆ. ಹೀಗಾಗಿ ಜನ ಎಚ್ಚೆತ್ತುಕೊಳ್ಳಬೇಕು. ಆದರೆ ಮಂಡ್ಯದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗದ ಕಾರಣ ಜಿಲ್ಲಾಡಳಿತವೇ ಲಾಕ್ ಡೌನ್ ನನ್ನು ಕೊಂಚ ಸಡಿಲಗೊಳಿಸಿದೆ. ಒಂದೇ ದಿನ ಲಾಕ್ ಡೌನ್ ಮುಕ್ತಾಯಗೊಂಡರೆ ಜನ ಏಕಕಾಲಕ್ಕೆ ಮನೆಯಿಂದ ಹೊರಬರುತ್ತಾರೆ. ಇದರಿಂದ ಆಪಾಯ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದ್ದು ಮಂಡ್ಯದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಅನ್ನು ಸಡಿಲಗೊಳಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಿಂತನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲ ಷರತ್ತುಗಳನ್ನು ವಿಧಿಸಿ ಸೆಲೂನ್ ಹಾಗೂ ಬೇಕರಿ ತೆರೆಯಲು ಅನುಮತಿ ನೀಡಿದೆ. ಜೊತೆಗೆ ನಿನ್ನೆಯಿಂದಲೇ ಮೀನು, ಕೋಳಿ, ಕುರಿ ಮಾಂಸ ಮಾರಾಟಕ್ಕೆ ಜಿಲ್ಲೆಯಲ್ಲಿ ಅನುಮತಿ ನೀಡಲಾಗಿದೆ. ಕೊರೊನಾ ಸೋಂಕು ಹರಡುವ ಭೀತಿಯಿಂದ ಜಿಲ್ಲಾಡಳಿತ ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಿತ್ತು. ಸದ್ಯ ಅದನ್ನ ತೆರೆಯಲೂ ಅನುಮತಿ ನೀಡಿದೆ.
ಆದರೆ ಜಿಲ್ಲಾಡಳಿತದ ಈ ನಡೆಯನ್ನು ಕೆಲ ಜನ ಆಕ್ಷೇಪಿಸಿದ್ದಾರೆ. ಮೈಸೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹೀಗಿರುವಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾ ಗಿ ಜನ ಗುಂಪಾಗಿ ಸೇರುವುದರಿಂದ ಸೋಂಕು ಇನ್ನಷ್ಟು ವೇಗವಾಗಿ ಹರಡಲು ಸಾಧ್ಯವಾಗುತ್ತದೆ ಎಂದು ಜನ ಆರೋಪ ಮಾಡುತ್ತಿದ್ದಾರೆ.

