ಮರಳಿ ಗೂಡೂ ಸೇರಿದ ಮಹದೇವ ಎಂಟು ವರ್ಷಗಳ ಬಳಿಕ ಸಂತಸಗೊಂಡ ಕುಟುಂಬ

ಮನೆ ಬಿಟ್ಟು ಬಂದಿದ್ದ ವ್ಯಕ್ತಿಯೊಬ್ಬರು ನೆನಪಿನ ಶಕ್ತಿ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಗೊತ್ತು ಗುರಿಯಿಲ್ಲದೆ ಬದುಕು ಬದುಕುತ್ತಿದ್ದರು. ಇವರಿ ಚಿಕಿತ್ಸೆ ನೀಡಿದ ಎಂಟು ವರ್ಷಗಳ ಬಳಿಕ ಗುಣಮುಖರಾಗಿದ್ದಾರೆ.

ಅಲ್ಲದೆ ಅವರ ಊರು, ಕುಟುಂಬ ನೆನಪಾಗಿ, ಪತ್ನಿ ಮತ್ತು ಮಗನನ್ನ ಸೇರಿದ್ದಾರೆ. ಇಂತಹದ್ದೊಂದು ಸನ್ನಿವೇಶಕ್ಕೆ ಚಿತ್ರದುರ್ಗದ ಗೋನೂರು ನಿರಾಶ್ರಿತರ ಕೇಂದ್ರ ಕಾರಣವಾಗಿತ್ತು. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದ ಮಹಾದೇವ ಎಂಬಾತ ಕುಟುಂಬದ ನಿರ್ವಹಣೆಗೆ ಅಂತ ದೂರದ ಬೆಂಗಳೂರಿಗೆ. ಅಲ್ಲಿ ಕೂಲಿ ಕೆಲಸ ಮಾಡಿ ದುಡಿಯಬೇಕು,ಬಂದ ಹಣದಿಂದ ತನ್ನ ಕುಟುಂಬವನ್ನ ಚೆನ್ನಾಗಿ ಸಾಕಬೇಕು ಎಂದು ಕೊಂಡಿದ್ದ.ಆದರೆ ನೂರಾರು ಕನುಸುಗಳನ್ನ ಹೊತ್ತು ಬೆಂಗಳೂರಿಗೆ ಹೋಗಿದ್ದ ಮಹದೇವ ಅದ್ಯಾಕೋ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ.

ಬೆಂಗಳೂರನ್ನೂ ಬಿಟ್ಟು ತನ್ನೂರಿಗೆ ಬಂದಿದ್ದ ಮಹಾದೇವ 2011ರಲ್ಲಿ ಮನೆಯನ್ನೂ ಬಿಟ್ಟು ಹೊರಟುಹೋಗಿದ್ದ. ಆದರೆ ಆತ ಸಿಕ್ಕಿದ್ದು ಚಿತ್ರದುರ್ಗ ಜಿಲ್ಲೆಯ ಪೊಲೀಸರಿಗೆ.ಆಗ ಭಯಾನಕ ಹೆದರಿಕೆ ಹುಟ್ಟಿಸಿದ್ದ ಸೈಕೋ ಕಿಲ್ಲರ್ ಜಯಶಂಕರ್ ನ ಬಂದಿಸಲು ಪೊಲೀಸರು ಹದ್ದಿನ ಕಣ್ಣಿಟ್ಟು ಉಡುಕಾಡುತ್ತಿದ್ದರು.ಆ ಸಂದರ್ಭದಲ್ಲಿ ಗಡ್ಡಮಂಮಡೆ ಬಿಟ್ಟುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಾ ಸಿಕ್ಕವನೇ ಹೆಗ್ಗನದೊಡ್ಡಿಯ ಮಹದೇವ.ಹೀಗೆ ಸಿಕ್ಕಿದ್ದ ಮಹದೇವನನ್ನ ನೋಡಿದ್ದ ಪೊಲೀಸರು, ಈತನೇ ಸೈಕೋ ಕಿಲ್ಲರ್ ಜಯಶಂಕರ್ ಇರಬಹುದು ಅನ್ನೋ ಅನುಮಾನದ ಮೇಲೆ ದಾರಿಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಾದೇವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.ವಿಚಾರಣೆಯ ಸಂದರ್ಭದಲ್ಲಿ ಈತನ ಪ್ರತಿಕ್ರಿಯೆ, ಹಾಗೂ ಮಾನಸೀಕ ಸ್ಥಿಮಿತತೆ ನೋಡಿ ಆ ನಂತರ ಈತ ಮಾನಸಿಕ ಅಸ್ವಸ್ಥ ಎಂಬುದನ್ನರಿತ ಪೊಲೀಸರು ಚಿತ್ರದುರ್ಗದ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದರು.

ನಿರಾಶ್ರಿತರ ಕೇಂದ್ರಕ್ಕೆ ಸೇರಿದ್ದ ಮಹದೇವನಿಗೆ ಅಲ್ಲಿನ ಅಧಿಕಾರಿಗಳು ಸುಧೀರ್ಘ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದ್ದರು. ಮಹದೇವನ ಅದೃಷ್ಠವೋ ಏನೋ ಚಿಕಿತ್ಸೆ ಪಲಿಸಿ ಆತ ಮೊದಲಿನಂತೆ ಗುಣವಾಗಿ ತನ್ನ ಕುಟುಂಬ, ಮತ್ತು ತನ್ನೂರಿನ ವಿವರವನ್ನ ಹೇಳಿಕೊಂಡಿದ್ದಾನೆ.ಬಳಿಕ ಮೊದಲಿನಂತಾದ ಮಹಾದೇವನ ಪೂರ್ವಾಪರ ವಿಚಾರಿಸಿದ ನಿರಾಶ್ರಿತರ ಕೇಂದ್ರದ ಅಧಿಕಾರಿಗಳು ಆತನನ್ನ ಮರಳಿ ಗೂಡು ಸೇರಿಸಲು ಪ್ರಯತ್ನಿಸಿ ಕುಟುಂಬದವರಿಗೆ ವಿಷಯ ತಿಳಿಸಿ ಮಹದೇವನನ್ನ ಪತ್ನಿ ಮತ್ತು‌ ಮಗನಿಗೆ ಒಪ್ಪಿಸಿ ಯಶಸ್ವಿಯಾಗಿದ್ದಾರೆ. ಇನ್ನೂ ಎಂಟು ವರ್ಷಗಳ ಹಿಂದೆ ಕಾಣೆಯಾಗಿದ್ದ ತಮ್ಮನನ್ನು ಕಂಡು ಆನಂದದ ಕಂಬನಿ ಮಿಡದಿದ್ದು.

ಎಂಟು ವರ್ಷಗಳ ಬಳಿಕ ತನ್ನ ತಂದೆಯನ್ನ ನೋಡಿದ ಮಗ ತಂದೆಯನ್ನ ತಬ್ಬಿ ಕಣ್ಣೀರಿಟ್ಟಿದ್ದ.ಅಲ್ಲದೆ ತನ್ನ ಪತಿಯಿಂದ ದೂರಾಗಿದ್ದ ಪತ್ನಿ ಆನಂದದಿಂದ ಕಂಬನಿ ಮಿಡಿದಿದ್ದಾರೆ.ಅಲ್ಲದೆ ಮಹದೇವನನ್ನು ಸಂತೋಷದಿಂದ ಮರಳಿ ಮನೆಗೆ ಕರೆದೊಯ್ದಿದ್ದಾರೆ.

ಒಟ್ಟಾರೆ ಮನೆ ಬಿಟ್ಟು ಮಾನಸೀಕ ಸ್ಥಿಮಿತತೆ ಕಳೆದುಕೊಂಡು ಬಂದು ಒಂಬ್ಬೊಂಟಿಯಾಗಿ ಅಲೆಯುತ್ತಿದ್ದ ಮಹದೇವ ಸೈಕೋ ಕಿಲ್ಲರ್ ಜೈಶಂಕರ್ ಹೆಸರಲ್ಲಿ ಪೋಲೀಸರಿಗೆ ಸಿಕ್ಕಿದ್ದು ತನ್ನ ಬದುಕಿನ ಹಾದಿಯನ್ನ ಹುಡುಕಿ ಕೊಟ್ಟಂತಾಗಿದೆ. ಇನ್ನೇನು ಆತನ ನೆನಪನ್ನ ಮರೆತಿದ್ದ ಕುಟುಂಬಕ್ಕೆ ಇದೀಗ ಮಹದೇವನ ಮರು ಹುಟ್ಟಿನ ಸಂಭ್ರದ ಕಳೆ ಕಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights