ರಾಜ್ಯದಲ್ಲಿಂದು ಹೊಸದಾಗಿ 45 ಕೊರೊನಾ ಕೇಸ್ : ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇಂದು ಹೊಸದಾಗಿ 45 ಕೊರೊನಾ ಕೇಸ್ ದಾಖಲಾಗಿದ್ದು ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1032ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿರಿಯನ್ನು ನೀಡಿದೆ.

ಹೌದು… ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದ ವರೆಗೂ 45 ಕೊರೊನಾ ಕೇಸ್ ದಾಖಲಾಗಿವೆ. ಈ ಪೈಕಿ ಉಡುಪಿ 5, ದಕ್ಷಿಣ ಕನ್ನಡ 16 ಬೀದರ್ 3, ಬಾಗಲಕೋಟೆ 1, ಕೋಲಾರ 1, ಚಿತ್ರದುರ್ಗ 2, ಹಾಸನ 3, ಬೆಂಗಳೂರಿನಲ್ಲಿ 13 ಮತ್ತು ಶಿವಮೊಗ್ಗ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

476 ಜನ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಕೊರೋನಾಗೆ ಸೋಂಕಿನಿಂದ ರಾಜ್ಯದಲ್ಲಿ ಒಟ್ಟು 35 ಮಂದಿ ಬಲಿಯಾಗಿದ್ದಾರೆ.

ಮಂಗಳೂರಿಗೆ ದುಬೈನಿಂದ ಬಂದವರು ಸೇರಿ ಒಟ್ಟು 16 ಜನರಿಗೆ ಸೋಂಕು ದೃಢವಾಗಿದೆ. ಮೇ 12 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೇ 13 ರಂದು ಮಂಗಳೂರಿನಲ್ಲಿ ಕ್ವಾರಂಟೈನ್ ಆದ 96 ಜನರ ಥ್ರೋಟ್ ಸ್ಕ್ವಾಬ್ ತೆಗೆಯಲಾಗಿತ್ತು. ಇಂದು ಹೆಲ್ತ್ ಬುಲೆಟಿನ್ ನಲ್ಲಿ 16 ಜನರಿಗೆ ಕೊರೊನಾ ಸೋಂಕು ಇರುವ ಬಗ್ಗೆ ದೃಢವಾಗಿದೆ.

45 ಜನ ಸೋಂಕಿತರಲ್ಲಿ ಇಬ್ಬರು ಬಾಲಕಿಯರು, ಪುರುಷರು 10, ಮಹಿಳೆಯರು 6, ಯುವಕರು 16 , ಒಂದು ಮಗು, ವೃದ್ಧರು 6, ಬಾಲಕರು ಇಬ್ಬರು, ಇಬ್ಬರು ಯುವತಿಯರಿದ್ದಾರೆ. ಆದರೆ ನಿನ್ನೆಗೆ ಹೋಲಿಸಿದರೆ ಇಂದು ಯುವಕರಿಗೇ ಹೆಚ್ಚು ಸೋಂಕು ಹರಡಿರುವುದು ಕಂಡು ಬರುತ್ತದೆ. ನಂತರದಲ್ಲಿ 40 ವರ್ಷ ಮೇಲ್ಪಟ್ಟ ಪುರುಷರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಿರುವುದು ಕಂಡು ಬರುತ್ತದೆ. ಇನ್ನೂ ಮಕ್ಕಳ ವಿಚಾರಕ್ಕೆ ಬಂದರೆ ಇಬ್ಬರು ಬಾಲಕ ಹಾಗೂ ಇಬ್ಬರು ಬಾಲಕಿಯರಿಗೆ ಸೋಂಕು ತಗುಲಿದ್ದಿ ಒಂದು ಮಗು ಕೂಡ ಸೇರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights