ರಾಜ್ಯದಲ್ಲಿಂದು ಹೊಸದಾಗಿ 69 ಕೊರೊನಾ ಕೇಸ್ ದೃಢ : ಸೋಂಕಿತರ ಸಂಖ್ಯೆ 2158ಕ್ಕೇರಿಕೆ!

ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದಕ್ಕೆ ಸಾಕ್ಷಿ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಳಿತ ಕಂಡು ಬರುತ್ತಿದೆ. ಇಂದು ಹೊಸದಾಗಿ 69 ಪಾಸಿಟಿವ್ ಕೇಸ್ ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ  2158ಕ್ಕೇರಿಕೆಯಾಗಿದೆ.

ಹೌದು.. ಆರೋಗ್ಯ ಇಲಾಖೆ ನೀಡಿದ ಮದ್ಯಾಹ್ನದ ಹೆಲ್ತ್ ಬುಲಿಟಿನ್ ನಲ್ಲಿ ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದವರೆಗೆ 69 ಕೊರೊನಾ ಕೇಸ್ ದಾಖಲಾಗಿವೆ. 69 ಸೋಂಕಿತರಲ್ಲಿ 55 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿರುವವರಿಗೆ ಕೊರೊನಾ ಬಂದಿದೆ. ಇಂದು ದಾಖಲಾದ 69 ಸೋಂಕಿತರಲ್ಲಿ ಉಡುಪಿಯಲ್ಲಿ ಇಂದು ದಾಖಲಾದ 14ಕೇಸ್ ಗಳಲ್ಲಿ 4,5,6,9 ವರ್ಷದ  ಮಕ್ಕಳು ಇದ್ದು, ಮಹಾರಾಷ್ಟ್ರದ ಹಿನ್ನೆಲೆ ಇದೆ.

ಇನ್ನೂ ಯಾದಗಿರಿಯಲ್ಲಿ ಇಂದು 15 ಕೇಸ್ ದಾಖಲಾಗಿದ್ದು ಮುಂಬೈ ಲಿಂಕ್ ಇದೆ. ಜೊತೆಗೆ ಬೆಂಗಳೂರು 6, ಬಳ್ಳಾರಿ 3, ಧಾರವಾಡ 3,ಕೊಲಾರ 1, ಮಂಡ್ಯ 2, ಕಲಬುರಗಿ 14, ವಿಜಯಪುರ 1, ಬೀದರ್ 1, ತುಮಕೂರು 1, ದಕ್ಷಿಣ ಕನ್ನಡ 3, ಬೆಳಗಾವಿ 1 ಮತ್ತು ರಾಮನಗರ 1 ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ವರೆಗೆ ರಾಜ್ಯದಲ್ಲಿ ದಾಖಲಾದ 2158 ಕೊರೊನಾ ಕೇಸ್ ಗಳ ಪೈಕಿ ಒಟ್ಟು 680 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 44 ಜನ ಸಾವನ್ನಪ್ಪಿದ್ದಾರೆ. ಇನ್ನುಳಿದ ಸೋಂಕಿತರಿಗೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.  ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ 44 ಮಂದಿ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರಿನ 40 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights