ಲಾಕ್ ಡೌನ್ ಸಡಿಲಿಕೆ – ಸಿಲಿಕಾನ್ ಸಿಟಯ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್!

ರಾಜ್ಯದಲ್ಲಿಂದು 16 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 9 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ರಾಜ್ಯದಲ್ಲಿ ಲಾಕ್ ಡೌನನ್ನು ತಪ್ಪಾಗಿ ಭಾವಿಸಿದ್ದರಿಂದ ಇಂದು ಸಿಲಿಕಾನ್ ಸಿಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ರಾಜ್ಯ ಸರ್ಕಾರ  ಸರ್ಕಾರಿ ಕಚೇರಿ, ಐಟಿ-ಬಿಟಿ, ಗೂಡ್ಸ್ ಸರ್ವೀಸ್, ಕೃಷಿ ಚಟುವಟಿಕೆ, ಎಪಿಎಂಸಿ ಮತ್ತು ಇನ್ನಿತರ ತುರ್ತು ಸೇವೆಗಳಿಗೆ ವಿನಾಯಿತಿ ನೀಡಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿ ಆಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಬೈಕ್ ಮತ್ತು ಕಾರುಗಳು ನಿಂತಿವೆ.

ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್, ಸ್ಲೋ ಮೂವಿಂಗ್ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಲಾಕ್ ಡೌನ್ ಸಡಿಲಿಕೆಯನ್ನ ತಪ್ಪಾಗಿ ತಿಳಿದಿರೋ ಸಿಲಿಕಾನ್ ಸಿಟಿ ಮಂದಿ, ಇವತ್ತು ಒಮ್ಮೆಲೆ ತಮ್ಮ ವಾಹನಗಳಲ್ಲೇ ರಸ್ತೆಗೆ ಇಳಿದಿದ್ದಾರೆ.

ಇನ್ನು ಬೆಂಗಳೂರಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಪೊಲೀಸರಿಗೆ ವೆಹಿಕಲ್ ಚೆಕ್ಕಿಂಗ್ ಮಾಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೌನ್ ಹಾಲ್ ಮುಂಭಾಗದಲ್ಲಿಯೇ ವೆಹಿಕಲ್ ಚೆಕ್ಕಿಂಗ್ ಪಾಯಿಂಟ್ ಇರೋದ್ರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಎರಡು ಆ್ಯಂಬುಲೆನ್ಸ್​ಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಂಡವು. ಅಲ್ಲದೇ, ಅರ್ಧ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ವು. ಕೊನೆಗೆ ಆ್ಯಂಬುಲೆನ್ಸ್ ಗೆ ದಾರಿ ನೀಡಲು ಪೊಲೀಸರು ಹಲವು ವಾಹನಗಳನ್ನು ಚೆಕ್ ಮಾಡದೆ ಕಳುಹಿಸಿದ್ರು.

ಇನ್ನು ಹಲವು ಸ್ಟೇಷನ್​ಗಳಲ್ಲಿ ಸೀಜ್​ ಮಾಡಿದ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಪರ್ಯಾಯ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ. ಈಗಾಗ್ಲೇ 41 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights