ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್ ಸದ್ದು : ಕಾಂಗ್ರೆಸ್ ಸದಸ್ಯರಿಂದ ಸಭಾತ್ಯಾಗ
ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರು ಗೋಲಿಬಾರ್ ಪ್ರಕರಣವನ್ನು ಪ್ರಶ್ನಿಸಿ ಧ್ವನಿ ಎತ್ತಿದರು.
ಡಿಸೆಂಬರ್ 18,19,20 ರಂದು ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದು ಕಾನೂನು ಉಲ್ಲಂಘನೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಅಮಾಯಕರ ಮೇಲೆ ಖಾಕಿ ರಾಕ್ಷಸ ಪ್ರವೃತ್ತಿ ಮೆರೆದಿದೆ. ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ಧು ಗರಂ ಆಗಿದ್ದಾರೆ.
ಇನ್ನೂ ಸದನದ ಕಲಾಪದಲ್ಲಿ ಸಿದ್ದರಾಮಯ್ಯ ಸಿಎಎ ಪರ ಮತ್ತು ವಿರೋಧದ ನಡುವೆ ನಡೆದ ತಾರತಮ್ಯ ಭಾವನೆಯನ್ನು ಕಠೋರವಾಗಿ ಪ್ರಶ್ನಿಸಿದ್ದಾರೆ. ಶಾಹೀಯಾನ್ ಶಿಕ್ಷಕಿ, ವಿದ್ಯಾರ್ಥಿನಿ ತಾಯಿ ವಿರುದ್ದ ಕೇಸ್ ಹಾಕಲಾಗಿದೆ. ಸಿಎಎ ವಿರೋಧಿಸುವವರ ಮೇಲೆ ದೇಶದ್ರೋಹದ ಕೇಸ್ ಹಾಕಲಾಗಿದೆ. ಶಾಸಕ ಯುಟಿ ಖಾದರ್ ವಿರುದ್ಧ ಕೇಸ್ ಹಾಕಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕಲಾಪದಲ್ಲಿ ಪ್ರಶ್ನೆ ಮಾಡಿದರು.
ಭಾರತ ಮಾತೆ ನಿಮ್ಮ ಸ್ವತ್ತು ಅಲ್ಲ. ಮೋದಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದರು. ನಾವೆಲ್ಲ ಭಾರತ ಮಾತೆ ಮಕ್ಕಳು. ಎಲ್ಲರಿಗೂ ಸಮಾನತೆಯ ಭಾವ ಇರಲಿ ಎಂದರು.
ಇದರ ಬಗ್ಗೆ ವಿಸ್ತಾರವಾಗಿ ಚರ್ಚೆಗೆ ಅವಕಾಶ ಕೊಡಲು ಸ್ಪೀಕರ್ ಬಳಿ ಮನವಿ ಕೂಡ ಮಾಡಿಕೊಂಡರು. ಇದಕ್ಕೆ ಸದ್ಯ ಅವಕಾಶ ಕೊಡದ ಹಿನ್ನಲೆಯಲ್ಲಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

