ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟ, ಇಬ್ಬರು ಕಾರ್ಮಿಕರ ಸಾವು…!

ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ವಿಜಯಪುರ ನಗರದ ರೇಲ್ವೆ ನಿಲ್ದಾಣದ ಬಳಿ ನಾಡಗೌಡ ರೋಡಲೈನ್ಸ್ ನಲ್ಲಿ ನಡೆದಿದೆ.

ರಾಜೂ ಹಾಗೂ ಪ್ರಕಾಶ ಟೋನಿ ಸಾವಿಗೀಡಾದ ಕಾರ್ಮಿಕರು. ರೋಡಲೈನ್ಸ್ ಗ್ಯಾರೇಜ್ ನಲ್ಲಿ ಕೆಲಸ ಮಾಡುವಾಗ ಟ್ಯಾಂಕರ್ ಬ್ಲಾಸ್ಟ್ ಆಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಎಥಿನಾಲ್ ಟ್ಯಾಂಕರ್ ಬ್ಲಾಸ್ಟ್ ಆಗಿ ನಡೆದ ದುರ್ಘಟನೆ‌. ಎಥಿನಾಲ್ ಖಾಲಿ‌ ಮಾಡಿದ ಬಳಿಕ ಗ್ಯಾರೇಜ್ ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಭಾರೀ ಸ್ಪೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದಾರೆ.

ಸ್ಥಳಕ್ಕೆ ಗೋಳಗುಮ್ಮಟ‌ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights