ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರ : ಅನರ್ಹ ಶಾಸಕ ಹೆಚ್. ವಿಶ್ವನಾಥ್ ಗೆ ತಿರುಗೇಟು
ಹುಣಸೂರು ಪ್ರತ್ಯೇಕ ಜಿಲ್ಲೆಗೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಿರುಗೇಟು ನೀಡಲಾಗಿದೆ.
ಹೆಚ್. ವಿಶ್ವನಾಥ್ ಅವರ ಇಷ್ಟು ವರ್ಷದ ರಾಜಕಾರಣದಲ್ಲಿ ಹುಣಸೂರು ಜಿಲ್ಲೆ ಆಗಬೇಕು ಎನ್ನುವ ವಿಷಯವನ್ನು ಎಷ್ಟು ಬಾರಿ ಪ್ರಸ್ತಾಪಿಸಿದ್ದಾರೆ? ಈಗ ಡಿಸೆಂಬರ್ 5 ರಂದು ಉಪಚುನಾವಣೆ ಬಂದಿರುವ ಕಾರಣಕ್ಕೆ ಇಂತಹ ಗಿಮಿಕ್ ಮಾಡಿದರೆ ಜನ ಒಪ್ಪುತ್ತಾರೆಯೇ ಎಂದು ಪ್ರಶ್ನಿಸಲಾಗಿದೆ.
ಇಂತಹ ರಾಜಕೀಯ ಪ್ರೇರಿತ ಅಭಿಪ್ರಾಯವನ್ನು ಮತದಾರರು ತಿರಸ್ಕರಿಸಲಿದ್ದಾರೆ. ವಿಜಯನಗರ ಜಿಲ್ಲೆ ಆಗಬೇಕು, ಹುಣಸೂರನ್ನು ಜಿಲ್ಲೆ ಮಾಡಬೇಕು ಎನ್ನುವಂತಹ ವಿಚಾರಗಳನ್ನು ಸ್ವಾರ್ಥ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಜಿಲ್ಲೆಯ ಮುಖಂಡರು, ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಿಸಬೇಕು. ಅಗತ್ಯತೆ ಇದ್ದಲ್ಲಿ ಒಮ್ಮತದಿಂದ ವ್ಯವಸ್ಥಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಲಾಗಿದೆ.

