ಅಗತ್ಯತೆಗಳನ್ನು ಪೂರೈಸಿ; ಇಲ್ಲವೇ ಕಂಟೈನ್ಮೆಂಟ್‌ ಮುಕ್ತಗೊಳಿಸಿ; ಕೊರೊನಾ ನಡುವೆಯೂ ಬೀದಿಗಳಿದು ಪ್ರತಿಭಟಿಸಿದ ಜನ!

ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿರುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉಚಿತ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿಲ್ಲ ಎಂದು ಕಂಟೈನ್ಮೆಂಟ್ ಝೋನ್ ಜನರು ಆರೋಪಿಸಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆ ಮಾಡಿ, ಇಲ್ಲವೇ ಕಂಟೈನ್ಮೆಂಟ್‌ ಜೋನ್‌ ತೆರವುಗೊಳಿಸಿ ಎಂದು ಜನರು ಮನೆಯಿಂದ ಹೊರನಿಂತು ಪ್ರತಿಭಟಿಸಿದ್ದಾರೆ.

ಮಡಿಕೇರಿಯ ಗೌಳಿಬೀದಿಯ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಏರಿಯಾವನ್ನು ಸೀಲ್‌ಡೌನ್ ಮಾಡಲಾಗಿದೆ. ಏರಿಯಾದಲ್ಲಿರುವ ಬಹುತೇಕ ಜನರು ಕೂಲಿ ಕೆಲಸ ಮಾಡಿ ಅಂದು ದುಡಿದು ಅಂದು ತಿನ್ನುವವರಿದ್ದೇವೆ. ಆದರೆ ಸೀಲ್‌ಡೌನ್ ಮಾಡಿರುವ ಜಿಲ್ಲಾಡಳಿತ ಜನರಿಗೆ ಯಾವುದೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ. ಬದಲಾಗಿ ಹಣಕೊಟ್ಟೆ ಕೊಂಡುಕೊಳ್ಳಿ ಎನ್ನುತ್ತಿದೆ. ಕಂಟೈನ್ಮೆಂಟ್ ಝೋನ್ ಮಾಡಿ ಒಳಗೆ ಕುಳಿತುಕೊಂಡು ಹಣಕೊಟ್ಟು ಕೊಂಡುಕೊಳ್ಳಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕಂಟೈನ್ಮೆಂಟ್ ಏರಿಯಾದಲ್ಲಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಆದರೆ ಅಗತ್ಯ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಜನರು ಕೊರೊನಾದ ಯಾವುದೇ ಆತಂಕವಿಲ್ಲದೆ ಮನೆಯಿಂದ ಹೊರಬಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಜಿಲ್ಲಾಡಳಿತ ಕಂಟೈನ್ಮೆಂಟ್ ಏರಿಯಾದಲ್ಲಿರುವ ಎಲ್ಲಾ ಕುಟುಂಬಗಳಿಗೂ ಅಗತ್ಯ ವಸ್ತುಗಳ ಪೂರೈಕೆ ಮಾಡಲಿ. ಇಲ್ಲವೆ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಿ ನಮ್ಮ ದುಡಿಮೆಗಾದರೂ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.


ಇದನ್ನೂ ಓದಿ: ಬಿಹಾರ ಚುನಾವಣೆಗೆ ಮೋದಿ ಮಂತ್ರಗಳೇನು? ಸೈನ್ಯ ಮತ್ತು ಜಾತಿಗಳು ಮೋದಿಯ ಅಸ್ತ್ರವಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights