ಅರ್ಜುನ ಸರ್ಜಾ ಪುತ್ರಿ, ನಟಿ ಐಶ್ವರ್ಯಾ ಅರ್ಜುನ್‌ಗೂ ಕೊರೊನಾ ಪಾಸಿಟಿವ್‌!

ಕೊರೊನಾ ಸೋಂಕಿನ ಬಿಸಿ ಇತ್ತೀಚೆಗೆ ಸ್ಯಾಂಡಲ್‌ವುಡ್‌ ಚಿತ್ರರಂಗಕ್ಕೂ ಪ್ರವೇಶಿಸುತ್ತಿದೆ. ಕಳೆದವಾರ ದ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ತಗುತ್ತಿತ್ತು. ಈದ ಅವರದ್ದೇ ಕುಟುಂಬದ ಮತ್ತೊಬ್ಬರಿಗೂ ಕೊರೊನಾ ಸೋಂಕು ದೃಢ ಪಟ್ಟಿದೆ.

ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ದುಖಃ ಮಾಸುವ ಮುನ್ನವೇ ಸರ್ಜಾ ಫ್ಯಾಮಿಲಿಯ ಇಬ್ಬರು ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕುಟುಂಬದ ಸದಸ್ಯರಲ್ಲಿ ಕೊಂಚ ಆತಂಕವನ್ನು ಸೃಷ್ಟಿಸಿತ್ತು. ಅದರ ಬೆನ್ನಲ್ಲೇ, ಅರ್ಜುನ್‌ ಸರ್ಜಾ ಪುತ್ರಿ, ನಟಿ ಐಶ್ವರ್ಯಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. 

ತಮಗೂ ಕೊರೊನಾ ಸೋಂಕು ತಗುಲಿರುವ ಬಗ್ಗೆ ಹೇಳಿಕೊಂಡಿರುವ ಐಶ್ವರ್ಯಾ, ‘ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಹೋಂ ಕ್ವಾರಂಟೈನ್​ ಆಗಿದ್ದು, ಮನೆಯಲ್ಲೇ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್​​ ಮಾಡಿಸಿಕೊಳ್ಳಿ ಮತ್ತು ಮನೆಯಲ್ಲೇ ಇರಿ,’ ಎಂದು ಹೇಳಿದ್ದಾರೆ.

ಐಶ್ವರ್ಯಾ ಇತ್ತೀಚೆಗೆ ಹೆಚ್ಚು ಜನರ ಸಂಪರ್ಕಕ್ಕೆ ಬಂದಿದ್ದರು. ಅದಕ್ಕೆ ಕಾರಣ ಚಿರಂಜೀವಿ ಸರ್ಜಾ ಅವರ ಸಾವು. ಚಿರಂಜೀವಿ ಅಂತ್ಯ ಕ್ರಿಯೆ ವೇಳೆ ಸಾವಿರಾರು ಜನರು ಸೇರಿದ್ದರು.ಈ ವೇಳೆ ಐಶ್ವರ್ಯಾ ಕೂಡ ಪಾಲ್ಗೊಂಡಿದ್ದರು.

ಜುಲೈ15ರಂದು ಟ್ವೀಟ್​ ಮಾಡಿದ್ದ  ಧ್ರುವ ಸರ್ಜಾ, “ನನಗೆ ಮತ್ತು ಪ್ರೇರಣಾರಲ್ಲಿ ಕೊರೊನಾ ಲಕ್ಷಣಗಳು ಇದ್ದಿದ್ದರಿಂದ ನಾವು ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಕೊರೋನಾ ಪಾಸಿಟಿವ್​ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಬೇಗ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮ ಜೊತೆ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್​ ಮಾಡಿಸಿ ಮನೆಯಲ್ಲೇ ಇರಿ,” ಎಂದು ದ್ರುವ ಸರ್ಜಾ ಹೇಳಿದ್ದರು.

https://twitter.com/DhruvaSarja/status/1283322008965648384?s=20

ಚಿರು ಸಾವು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ತಂದಿದೆ. ಹೀಗಿರುವಾಗಲೇ ಧ್ರುವಾ ಹಾಗೂ ಪ್ರೇರಣಾಗೆ ಕೊರೋನಾ ವೈರಸ್​ ಅಂಟಿತ್ತು. ಈಗ ಅವರ ಕುಟುಂಬದಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಕೊರೋನಾ ಬರುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.