ಕೊರೊನಾ ಎಫೆಕ್ಟ್ : ಇಂದಿನಿಂದ ಏಳು ದಿನಗಳವರೆಗೆ ಬೆಂಗಳೂರು ಲಾಕ್ಡೌನ್…
ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕದಲ್ಲಿ ಜನ ಗುಳೆ ಹೊರಟಿದ್ದಾರೆ. ಕೊರೊನ ವೈರಸ್ ಹರಡುವುದನ್ನ ತಡೆಗಟ್ಟಲು ಕರ್ನಾಟಕ ಸರ್ಕಾರದ ಲಾಕ್ಡೌನ್ ಯೋಜನೆ ಜಾರಿ ಮಾಡಿದ್ದು, ಔಷಧಾಲಯಗಳನ್ನು ಹೊರತುಪಡಿಸಿ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿನ ಎಲ್ಲಾ ಅಗತ್ಯ ಅಂಗಡಿಗಳು ಬುಧವಾರದಿಂದ ಪ್ರಾರಂಭವಾಗುವ ಮುಂದಿನ ಏಳು ದಿನಗಳವರೆಗೆ ಬಂದ್ ಆಗಲಿವೆ.
ಜುಲೈ 13 ರವರೆಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್ಐ) ಐಸಿಯುಗಳಲ್ಲಿ ವೆಂಟಿಲೇಟರ್ನಲ್ಲಿ ಇಂಟ್ಯೂಬೇಟ್ ಮಾಡಲಾದ 90 ಕೋವಿಡ್ -19 ರೋಗಿಗಳಲ್ಲಿ 89 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಮಾತ್ರ ಚೇತರಿಸಿಕೊಳ್ಳುತ್ತಿದ್ದು ಆತಂಕ ಹೆಚ್ಚಾಗಿದೆ.
ನಗರ ಕೇಂದ್ರಗಳಾದ ಬೆಂಗಳೂರು, ಮುಂಬೈ ಮತ್ತು ಚೆನ್ನೈಗಳಿಂದ ಜನರು ತಮ್ಮ ಊರು / ಕರ್ನಾಟಕದ ಹಳ್ಳಿಗಳಿಗೆ ಸ್ಥಳಾಂತರಗೊಂಡಿದ್ದು, ಮೇ ತಿಂಗಳವರೆಗೆ ಕೊರೋನವೈರಸ್ ಮುಕ್ತವಾಗಿದ್ದ ಅನೇಕ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ.
ಸುಮಾರು ಒಂದೂವರೆ ತಿಂಗಳುಗಳಲ್ಲಿ 14 ಜಿಲ್ಲೆಗಳಲ್ಲಿ ಕನಿಷ್ಠ 100 ಪ್ರಕರಣಗಳು ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಕೋವಿಡ್ -19 ಸೋಂಕು ವರದಿಯಾಗಿವೆ.
ಲಾಕ್ಡೌನ್ ಆಘಾತವನ್ನು ಸುಗಮಗೊಳಿಸಲು ಸ್ವಯಂಸೇವಕರು ಸಹಾಯ ಮಾಡುತ್ತಿದ್ದು ನಗರದಲ್ಲಿ ಬಿಎಂಟಿಸಿ ಸಂಚಾರ, ಅಂಗಡಿ ಮುಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮದ್ಯಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ.ದಿನಸಿ ಅಂಗಡಿಗಳು ಪ್ರತಿದಿನ ಮಧ್ಯಾಹ್ನ 12 ಗಂಟೆ ತನಕ ಮಾತ್ರ ತೆರೆದಿರುತ್ತವೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.