ಜಗತ್ತಿನ ಶ್ರೀಮಂತರಲ್ಲಿ ಆರನೇ ಸ್ಥಾನಕ್ಕೇರಿದ ಮುಖೇಶ್‌ ಅಂಬಾನಿ

ಇತ್ತೀಚಿನ ದಿನಗಳಲ್ಲಿ, ಮುಖೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳ ಹೂಡಿಕೆ ಹೆಚ್ಚಾಗುತ್ತಿದೆ.  ಇದರಿಂದಾಗಿ, ರಿಲಾಯನ್ಸ್ ಸಂಸ್ಥೆ​ ಮೌಲ್ಯ ಹೆಚ್ಚಾಗಿದ್ದು, ಮುಖೇಶ್​ ಅಂಬಾನಿ ಜಗತ್ತಿನ ಶ್ರೀಮಂತರಲ್ಲಿ ಆರನೇ ಸ್ಥಾನಕ್ಕೆ ಏರಿದ್ದಾರೆ.

ಜಿಯೋ ಸಂಸ್ಥೆಯ ಮೇಲೆ ಮೊದಲಿಗೆ ಫೇಸ್​ಬುಕ್​ ಸಂಸ್ಥೆ ಹೂಡಿಕೆ ಮಾಡಿತ್ತು. ನಂತರ ಸಿಲ್ವರ್​ ಲೇಕ್ ಸೇರಿ 13 ಸಂಸ್ಥೆಗಳು ಹೂಡಿಕೆ ಮಾಡಿವೆ. ಹೀಗಾಗಿ, ರಿಲಾಯನ್ಸ್​ ಸಂಸ್ಥೆಯ ಮೌಲ್ಯ ಹೆಚ್ಚಿದೆ. ಇದರಿಂದ ಅಂಬಾನಿ ವಿಶ್ವದ ಶ್ರೀಮಂತರ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಜಿಗಿದ್ದಾರೆ.

ಜಿಯೋ ಸಂಸ್ಥೆಯ ಮೇಲೆ ಹೂಡಿಕೆಗಳು ಆರಂಭವಾದ ನಂತರ ರಿಲಾಯನ್ಸ್​ ಷೇರುಗಳ ಮೌಲ್ಯ ಕೂಡ ಏರಿಕೆ ಕಂಡಿತ್ತು. ಸದ್ಯ ಅಂಬಾನಿ ಬಳಿ 5,45,823 ಕೋಟಿ ರೂಪಾಯಿ ಆಸ್ತಿ ಇದೆ.

ಮುಖೇಶ್ ಅಂಬಾನಿ ಈ ಮೊದಲು ತೈಲ ಉದ್ಯಮದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದರು. ಆದರೆ, ಈಗ ಅವರು ಈ ಕಾಮರ್ಸ್​​ನತ್ತ ಮುಖ ಮಾಡಿದ್ದು, ಡಿಜಿಟಲ್​ ಕ್ಷೇತ್ರದಲ್ಲಿ ಹೂಡಿಕೆ ಪಡೆಯುತ್ತಿದ್ದಾರೆ.

ಅಮೆರಿಕದ ಟೆಕ್​ ಸಂಸ್ಥೆ ಕ್ವಾಲ್​ಕಾಮ್​ ವೆಂಚರ್ಸ್​ ಜಿಯೋ ಸಂಸ್ಥೆ ಮೇಲೆ 730 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಈ ಮೂಲಕ ರಿಲಾಯನ್ಸ್​ ಮಾರುಕಟ್ಟೆ ಬಂಡವಾಳ​ 12 ಲಕ್ಷ ಕೋಟಿ ರೂಪಾಯಿ ಆಗಿದೆ. ಇದಲ್ಲದೆ, ಅಂಬಾನಿ ಭಾರತ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎನ್ನುವ ಖ್ಯಾತಿಯೂ ಅಂಬಾನಿಗೆ ಇದೆ.  ನ್ಯೂಸ್​18 ನೆಟ್ವರ್ಕ್​18 ಮೀಡಿಯಾ & ಇನ್ವಸ್ಟ್​​ಮೆಂಟ್​ ಲಿಮಿಟೆಡ್​ನ ಒಂದು ಭಾಗವಾಗಿದೆ. ನೆಟ್ವರ್ಕ್​18 ಒಡೆತನವನ್ನು ರಿಲಾಯನ್ಸ್ ಹೊಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights