ಭಾರತೀಯ ಸೇನೆಯ ಜೊತೆಗೆ ನಾವಿದ್ದೇವೆ ಅಭಿಯಾನ; ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆಗಳು!
‘ಶಾಹೀದೋಂಕೋ ಸಲಾಮ್ ದಿವಾಸ್’ (ಮಡಿದವರಿಗೆ ನಮನ ದಿನ) ಆಚರಿಸಲು ಕಾಂಗ್ರೆಸ್ ಶುಕ್ರವಾರ #SpeakUpForOurJawans ಎಂಬ ಆನ್ಲೈನ್ ಅಭಿಯಾನವನ್ನು ನಡೆಸಿತು. ಈ ಅಭಿಯಾನಕ್ಕೆ ಎರಡು ಕೋಟಿ ಸಹವರ್ತಿ ಭಾರತೀಯರು ಮತ್ತು ಕಾಂಗ್ರೆಸ್ ಸದಸ್ಯರು ಟ್ವಿಟರ್ನಲ್ಲಿ ಭಾಗಿಯಾಗಿದ್ದರು ಮತ್ತು ಕೋಟ್ಯಾಂತರ ಜನರು ಫೇಸ್ಬುಕ್, ಇನ್ಸ್ಟಾಗ್ರಾಂ ನಂತರ ಸಾಮಾಜಿಕ ಪ್ಲಾಟ್ಫಾರ್ಮ್ನಲ್ಲಿ ಆಂದೋಲನಕ್ಕೆ ಕೈಜೋಡಿಸಿದ್ದರು. ಚೀನಾದ ಪಡೆಗಳೊಂದಿಗಿನ ಲಡಾಖ್ನ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಇತ್ತೀಚೆಗೆ ಸಾವನ್ನಪ್ಪಿದ 20 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಈ ಅಭಿಯಾನವನ್ನು ಕಾಂಗ್ರೆಸ್ ಆಯೋಜಿಸಿತ್ತು.
“ಈ ಅಭಿಯಾನವು ದೇಶವನ್ನು ರಕ್ಷಿಸುವ ಪ್ರತಿಯೊಂದು ಪ್ರಯತ್ನದಲ್ಲೂ ಸಶಸ್ತ್ರ ಪಡೆಗಳೊಂದಿಗೆ ನಾವಿದ್ದೇವೆ ಎಂಬ ದೇಶದ ಒಗ್ಗಟ್ಟನ್ನು ವ್ಯಕ್ತಪಡಿಸುವ ಗುರಿಯನ್ನು ಹೊಂದಿದೆ” ಎಂದು ಎಐಸಿಸಿ ಸಂವಹನಗಳ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಜನಸಾಮಾನ್ಯ ಪುರುಷರು ಮತ್ತು ಮಹಿಳೆಯರು ನಮ್ಮ ಜವಾನರ ನೆನಪಿಗಾಗಿ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸುವ ಹಾಗೂ ಸೇನಾ ಪಡೆಗಳ ಬಗೆಗೆ ಅವರ ಭಾವನೆಗಳನ್ನು ವ್ಯಕ್ತಪಡಿಸುವ ಹೃದಯ ಸ್ಪರ್ಶಿಸುವ ವೀಡಿಯೊಗಳು ಮತ್ತು ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ” ಎಂದು ಪ್ರಕಟಣೆಯಲ್ಲಿ ಹೇಳಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರಗಳನ್ನು ಕೋರಿ ಲಕ್ಷಾಂತರ ಜನರು ತಮ್ಮ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿನ ಹೇಳಿಕೆ ತಿಳಿಸಿದೆ:
- ಚೀನಾ ಪಡೆಗಳು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಎಷ್ಟು ಧೈರ್ಯ?
- ನಮ್ಮ ಭೂಮಿಯನ್ನು ನಮಗೆ ಹಿಂದಿರುಗುವ ಬಗ್ಗೆ ಮೋದಿ ಸರ್ಕಾರ ಹೇಗೆ ಮತ್ತು ಯಾವಾಗ ಖಚಿತಪಡಿಸುತ್ತದೆ?
- ಚೀನಾದ ಉಲ್ಲಂಘನೆಗಳನ್ನು ಹಿಮ್ಮೆಟ್ಟಿಸಲು ಮೋದಿ ಸರ್ಕಾರದ ಯೋಜನೆಗಳೇನು?
- ಪ್ಯಾಂಗೊಂಗ್ ತ್ಸೊ ಸರೋವರ ಪ್ರದೇಶದಲ್ಲಿ ಫಿಂಗರ್ -4 ಮತ್ತು ಫಿಂಗರ್ -8 ನಡುವೆ ಚೀನಾದ ಆಕ್ರಮಣ ಮತ್ತು ಬಂಕರ್ ನಿರ್ಮಾಣ ಇತ್ಯಾದಿಗಳ ಬಗ್ಗೆ ಮೋದಿ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತಿದೆ?
- ಸರೋವರದ ಒಳಗೆ 18 ಕಿಲೋಮೀಟರ್ ದೂರದಲ್ಲಿರುವ ವೈ-ಜಂಕ್ಷನ್ ವರೆಗಿರುವ ಡೆಪ್ಸಾಂಗ್ ಬಯಲು ಪ್ರದೇಶದಲ್ಲಿನ ಚೀನಾದ ಉಲ್ಲಂಘನೆಗಳನ್ನು ಸರ್ಕಾರ ಏಕೆ ಗಮನಿಸುತ್ತಿಲ್ಲ?
- ಪೂರ್ವ ಲಡಾಕ್ನಲ್ಲೂ ಮತ್ತು ಗಾಲ್ವಾನ್ ನದಿತಟದಲ್ಲಿ ಚೀನಾದ ಸೈನ್ಯವನ್ನು ಹಿಂದೆ ಕಳಿಸುವ ಬಗ್ಗೆ ಸರ್ಕಾರ ಗಮನಿಸಿದೆಯೇ?
- ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ?
- ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ದುರ್ಬಲಗೊಳಿಸುವ ವಿರೋಧಾತ್ಮಕ ಹೇಳಿಕೆಗಳನ್ನು ಪ್ರಧಾನಿ ಏಕೆ ನೀಡುತ್ತಿದ್ದಾರೆ?

