ರಿಲೀಸ್‌ಗೆ ರೆಡಿಯಾಗಿದೆ ಮಯೂರಿ ಥ್ರಿಲ್ಲಿಂಗ್‌ ಮೂವಿ: ಆದ್ಯಂತ ಫಸ್ಟ್‌ ಲುಕ್‌ ಬಿಡುಗಡೆ ನಾಳೆ!

ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆ ಪರಿಯವಾದ ನಟಿ ಮಯೂರಿ, ಸೀರಿಯಲ್‌ ಪ್ರೇಮಿಗಳ ಮನದಲ್ಲಿ ಮನೆ ಮಾಡಿದ್ದರು. ಕೃಷ್ಣಲೀಲಾ ಸಿನಿಮಾದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ ಮಯೂರಿಯವರ ಹೊಸ ಸಿನಿಮಾ “ಆದ್ಯಂತ” ಟೈಟಲ್‌ನ ಫಸ್ಟ್‌ಲುಕ್‌ ರಿಲೀಸ್‌ಗೆ ರೆಡಿಯಾಗಿದೆ.

ಕೃಷ್ಣಲೀಲಾ, ಇಷ್ಟಕಾಮ್ಯ, ನಟರಾಜ ಸರ್ಮಿಸ್‌, ರುಸ್ತುಂ, ಪೊಗರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಮಯೂರಿ, ಮಹಿಳಾ ಕೇಂದ್ರಿತ ಥ್ರಿಲ್ಲಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. “ಆದ್ಯಂತ” ಸಿನಿಮಾ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಮುಚ್ಚಿರುವುದರಿಂದ ರಿಲೀಸ್‌ಗೆ ಡೇಟ್‌ ಇನ್ನೂ ಫಿಕ್ಸ್‌ ಆಗಿಲ್ಲ.

ಆದ್ಯಂತ ಚಿತ್ರವೂ ಕಂಪ್ಲೀಟ್‌ ಥ್ರಿಲ್ಲಿಂಗ್‌ ಸಿನಿಮಾವಾಗಿದ್ದು, ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದ ಚಿತ್ರದ ನಾಯಕಿ ದೀಪಾಳಿಗೆ (ಮಯೂರಿ) ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವಿಲ್ ಪತ್ರ ದೊರೆಯುತ್ತದೆ. ಆರ್ಥಿಕವಾಗಿ ತೊಂದರೆಯಲ್ಲಿದ್ದ ದೀಪ ವಿಲ್‌ನಲ್ಲಿ ಬರೆಯಲ್ಲಾಗಿದ್ದ ಆಸ್ತಿಯನ್ನು ಮಾರಾಟಮಾಡಲು ಸಕಲೇಶಪುರದ ಎಸ್ಟೇಟ್‌ಗೆ ತನ್ನ ಪ್ರೇಮಿಯೊಂದಿಗೆ ಬರುತ್ತಾಳೆ.

ಎಸ್ಟೇಟ್‌ ಮನೆಗೆ ಬಂದ ನಂತರ ಅಲ್ಲಿ ನಡೆಯುವ ವಿಚಿತ್ರ ಘಟನೆಗಳು. ಅವಳ ಆಸ್ತಿ ಮಾರಾಟಕ್ಕೆ ಸಹಕರಿಸುವ ಆ ಊರಿನ ಹಿರಿಯ ಐತಾಳರಿಗೂ(ರಮೇಶ್‌ ಭಟ್‌) ಹಾಗೂ ದಿಲೀಪನಿಗೂ ಆಕೆಯಲ್ಲಾಗುವ ಬದಲಾವಣೆಗಳು ಮತ್ತು ಘಟನೆಗಳು ಗಾಬರಿಯನ್ನುಂಟು ಮಾಡುತ್ತವೆ. ಸಮಸ್ಯೆಯನ್ನು ಬಗೆಹರಿಸಲು ಮುಂದಾಗುವ ದಿಲೀಪ್‌, ಆ ಸಂದರ್ಭದಲ್ಲಿ ಆತನ ಅರಿವಿಗೆ ಬರುವ ಶಾಕಿಂಗ್ ವಿಷಯಗಳು ಸಿನಿಮಾದ ಕತೆಯಾಗಿದೆ.

ರಮೇಶ್‌ ಬಾಬು ನಿರ್ಮಾಣದ, ಪುನೀತ್‌ ಶರ್ಮನ್‌ ನಿರ್ದೇಶಿಸಿರುವ ಆದ್ಯಂತ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಗೆ ಮುಂದಾಗಿದೆ.

https://www.instagram.com/p/CCbLKcsBt-1/?utm_source=ig_web_copy_link

ಇತ್ತೀಚೆಗಷ್ಟೇ ತನ್ನ ಬಹುಕಾಲದ ಸ್ನೇಹಿತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಮಯೂರಿಯವರು ಹುಟ್ಟಿದ ದಿನದ ಸಂಭ್ರಮದೊಂದಿಗೆ (11 ಜುಲೈ 2020) ಆದ್ಯಂತ ಸಿನಿಮಾದ ಫಸ್ಟ್‌ಲುಕ್‌ ರಿಲೀಸ್‌ ಆಗಲಿದೆ ಎಂದು ಮಯೂರಿ ಇಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಥ್ರಿಲ್ಲಿಂಗ್‌ನೊಂದಿಗೆ ನಿರ್ಮಾಣವಾಗಿರುವ ಸಿನಿಮಾ ಅದೆಷ್ಟು ಥ್ರಿಲ್ಲಿಂಗ್‌ ಆಗಿರಲಿದೆ. ಸಿನಿ ರಸಿಕರನ್ನು ಎಷ್ಟು ರಂಜಿಸಲಿದೆ ಎಂದು ಸಿನಿಮಾ ಬಿಡುಗಡೆಗಾಗಿ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.