ಚೀನಾ ಆಪ್ ಬ್ಯಾನ್ ಮಾಡಿ; ೫೦ ಹೊಸ ಹೂಡಿಕೆಗೆ ಚೀನಾಗೆ ಅವಕಾಶ ಕೊಡಲು ಮುಂದಾದ ಮೋದಿ ಸರ್ಕಾರ

ಚೀನಾದ ಕಂಪನಿಗಳನ್ನು ಒಳಗೊಂಡ ಸುಮಾರು 50 ಹೂಡಿಕೆ ಪ್ರಸ್ತಾಪಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಏಪ್ರಿಲ್‌ನಲ್ಲಿ ಸರ್ಕಾರ ಘೋಷಿಸಿದ ಹೊಸ ನಿಯಮಗಳ ಪ್ರಕಾರ, ನೆರೆಯ ರಾಷ್ಟ್ರಗಳನ್ನು ಆಧರಿಸಿದ ಘಟಕಗಳ ಹೊಸ ಹಾಗೂ ಹೆಚ್ಚುವರಿ ಹೂಡಿಕೆಗಳನ್ನು ಭಾರತ ಸರ್ಕಾರವೂ ಅನುಮೋದಿಸಬೇಕಾಗಿದೆ.

“ವಿವಿಧ ಅನುಮತಿಗಳ ಅಗತ್ಯವಿದೆ. ಯಾರೂ ಊಹಿಸದಷ್ಟು ನಾವು ಜಾಗರೂಕರಾಗಿರುತ್ತೇವೆ” ಎಂದು ನವದೆಹಲಿಯ ಹಿರಿಯ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ಗಡಿ ಘರ್ಷಣೆಯ ನಂತರ ಹೂಡಿಕೆ ಅರ್ಜಿಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಕೇಳಿದಾಗ ಹೇಳಿದ್ದಾರೆ.

ಗೌಪ್ಯತೆ ಕಾಳಜಿಯಿಂದಾಗಿ ಅನುಮೋದನೆಗಳು ಬಾಕಿ ಉಳಿದಿರುವ ಕಂಪನಿಗಳ ಹೆಸರನ್ನು ನೀಡಲು ಮೂಲಗಳು ನಿರಾಕರಿಸಿವೆ.

ನಿಯಮ ಬದಲಾವಣೆಯ ನಂತರ ಚೀನಾದ ಹೂಡಿಕೆದಾರರ ಧನಸಹಾಯವನ್ನು ಒಳಗೊಂಡ ಸುಮಾರು 40-50 ಅರ್ಜಿಗಳನ್ನು ಸಲ್ಲಿಸಲಾಗಿದೆ ಹಾಗೂ ಪ್ರಸ್ತುತ ಪರಿಶೀಲನೆಯಲ್ಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಚೀನಾದ ಭಾರತೀಯ ದೂತಾವಾಸಗಳು ಸೇರಿದಂತೆ ಅನೇಕ ಭಾರತೀಯ ಸರ್ಕಾರಿ ಸಂಸ್ಥೆಗಳು ಪ್ರಸ್ತಾವನೆಗಳ ಬಗ್ಗೆ ಸ್ಪಷ್ಟನೆ ಪಡೆಯಲು ಹೂಡಿಕೆದಾರರು ಮತ್ತು ಅವರ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಹೂಡಿಕೆ ಮಾಡಲು ಇತ್ತೀಚಿನ ವಾರಗಳಲ್ಲಿ ಕನಿಷ್ಠ 10 ಚೀನೀ ಗ್ರಾಹಕರು ತಮ್ಮ ಸಲಹೆಯನ್ನು ಕೋರಿದ್ದಾರೆ, ಆದರೆ ಭಾರತದಲ್ಲಿನ ನೀತಿ ದೃಷ್ಟಿಕೋನದ ಬಗ್ಗೆ ಹೆಚ್ಚಿನ ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ ಎಂದು ಭಾರತೀಯ ಕಾನೂನು ಸಂಸ್ಥೆಯ ಕೃಷ್ಣಮೂರ್ತಿ & ಕೋ ಪಾಲುದಾರರಾದ ಅಲೋಕ್ ಸೋಂಕರ್ ಹೇಳಿದ್ದಾರೆ.

ಕಳೆದ ವಾರ ಭಾರತವು ಟಿಕ್‌ಟಾಕ್‌ ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು  ನಿಷೇಧಿಸಿತ್ತು.


ಇದನ್ನೂ ಓದಿ: ಟಿಕ್‌ ಟಾಕ್ ಬ್ಯಾನ್‌ನಿಂದ ಕಂಪನಿಗಾದ ನಷ್ಟವೆಷ್ಟು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights