ಚಿಕಿತ್ಸೆ ಸಿಗದೆ ರೋಗಿ ಸಾವು: ಬೆಂಗಳೂರಿನ 18 ಆಸ್ಪತ್ರೆಗಳಿಗೆ ನೋಟಿಸ್ !
ಇನ್ಲುಯೆನ್ಜ ತರಹದ ರೋಗ ಲಕ್ಷಣಗಳಿಂದ ಸಾವನ್ನಪ್ಪಿದ ಬೆಂಗಳೂರಿನ 52 ವರ್ಷದ ರೋಗಿ ಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಬೆಂಗಳೂರಿನ 18 ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ನೋಟಿಸ್ ನೀಡಿದ್ದಾರೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ಭವರ್ಲಾಲ್ ಸುಜಾನಿ ಚಿಕಿತ್ಸೆಗಾಗಿ ಜೂನ್ 27 ಮತ್ತು 28 ರಂದು ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದರೂ, ಆಸ್ಪತ್ರೆಗಳು ಅವರನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿವೆ ಎಂದು ವರದಿಗಳು ಸೂಚಿಸಿದ ನಂತರ ನೋಟಿಸ್ ನೀಡಲಾಗಿದೆ. ಬೌರಿಂಗ್, ಪೋರ್ಟಿಸ್ ಮತ್ತು ಮಣಿಪಾಲ್ ಸೇರಿದಂತೆ 18 ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದು, ಆತನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದೇಕೆ ಎಂದು 24 ಗಂಟೆಗಳ ಒಳಗೆ ಉತ್ತರಿಸುವಂತೆ ತಿಳಿಸಿದ್ದು, ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ ಎಂದು ಹೇಳಲಾಗಿದೆ.
18 ಆಸ್ಪತ್ರೆಗಳು ಸುಜಾನಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಆತ ಸಾವನ್ನಪ್ಪಿದ್ದಾರೆ. ಅವರ ಪುತ್ರ ವಿಕ್ರಮ್ ಜೈನ್ ಮತ್ತು ಸೋದರಳಿಯ ದಿನೇಶ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದ ಸುಜಾನಿಯವರನ್ನು ಶನಿವಾರ ಮತ್ತು ಭಾನುವಾರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಯಾವುದೇ ಆಸ್ಪತ್ರೆಗಳು ಅವರನ್ನು ಸೇರಿಸಿಕೊಳ್ಳಲು ಮುಂದಾಗಿಲ್ಲ. ಹಾಗಾಗಿ ಅವರು ಸಾವನ್ನಪ್ಪಿದ್ದಾರೆ. ಯಾವುದೇ ಆಸ್ಪತ್ರೆಗಳು ಹಾಸಿಗೆಗಳು ಮತ್ತು ವೆಂಟಿಲೇಟರ್ಗಳು ನೆಪವೊಡ್ಡಿ ತಪ್ಪಿಸಿಕೊಳ್ಳುವಂತಿಲ್ಲ. ಖಾಸಗಿ ವೈದ್ಯಕೀಯ ಸಂಸ್ಥೆಗಳು, ಕೊರೊನಾ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲು/ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಮಿಷನರ್ ಪಂಕಜ್ ಕುಮಾರ್ ಪಾಂಡೆ ಸೋಟಿಸ್ನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹಠಾತ್ ಏರಿಕೆಯಾಗುತ್ತಿವೆ. ವಿಶೇಷವಾಗಿ ಜೂನ್ ಆರಂಭದಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿನ ಸುಮಾರು 100 ಐಸಿಯು ಹಾಸಿಗೆಗಳು ಪ್ರಸ್ತುತ ತುಂಬಿವೆ. ಖಾಸಗಿ ಆಸ್ಪತ್ರೆಗಳು ತಮ್ಮ ಹಾಸಿಗೆಯ ಶೇಕಡಾ 50 ರಷ್ಟು ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬಬೇಕು ಎಂದು ಸರ್ಕಾರ ಹೇಳಿದೆ.
ಕರ್ನಾಟಕ ಸರ್ಕಾರವು ರೋಗಿಗಳನ್ನು ದಾಖಲಿಸಲಾಗುವ ಖಾಸಗಿ ಆಸ್ಪತ್ರೆಗಳಿಗೆ ಸಾಮಾನ್ಯ ಹಾಸಿಗೆಗೆ ದಿನಕ್ಕೆ ತಲಾ 5,200 ರೂ. ಮತ್ತು ವೆಂಟಿಲೇಟರ್ ಹೊಂದಿರುವ ಐಸಿಯುಗೆ 10,000 ರೂಗಳನ್ನು ನೀಡುತ್ತದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಿಗೆ ಸ್ವಂತವಾಗಿ ದಾಖಲಾಗುವ ರೋಗಿಗಳಿಗೆ, ಸಾಮಾನ್ಯ ವಾರ್ಡ್ಗೆ 10,000 ರೂ. ಮತ್ತು ವೆಂಟಿಲೇಟರ್ ಹೊಂದಿರುವ ಐಸಿಯುಗೆ 25 ಸಾವಿರ ರೂ. ನಿಗದಿ ಮಾಡಲಾಗಿದೆ. ಆದಾಗ್ಯೂ, ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ವರದಿ ಮಾಡುವ ಮತ್ತು ಖಾಸಗಿ ವಿಮಾ ರಕ್ಷಣೆಯನ್ನು ಹೊಂದಿರುವ ರೋಗಿಗಳಿಗೆ ಯಾವುದೇ ವೆಚ್ಚ ಭರಿಸುವಂತಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗಳು ಖಾಸಗಿ ವಿಮೆಯನ್ನು ಹೊಂದಿರುವ ರೋಗಿಗಳಿಗೆ ಒಲವು ತೋರುತ್ತಿವೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ, ಕೊರೊನಾ ಪ್ರಕರಣಗಳಿಗೆ ಮೀಸಲಿಟ್ಟಿರುವ ಖಾಸಗಿ ವಲಯದ 1,619 ಹಾಸಿಗೆಗಳಲ್ಲಿ, ಜೂನ್ 1 ಮತ್ತು ಜೂನ್ 28 ರ ನಡುವೆ ಕೇವಲ 418 ಹಾಸಿಗೆಗಳು ಮಾತ್ರ ತುಂಬಿವೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದರೆ ವಿದ್ಯುತ್, ನೀರು ಬಂದ್!

