ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ: ಸಿದ್ದರಾಮಯ್ಯ
ಭಾರತ ಮತ್ತು ಚೀನಾ ನಡುವಿನ ಸಂಘರ್ಷಕ್ಕೆ ತೆರೆಬಿದ್ದಿದ್ದು, ಚೀನಾ ತನ್ನ ಸೈನಿಕರನ್ನು ಹಿಂಪಡದುಕೊಂಡಿದೆ. ಚೀನೀ ಸೈನಿಕರು 2 ಕಿ.ಮೀ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಬಿಜೆಪಿ ನಾಯಕ ಬಿಎಲ್ ಸಂತೋಷ್ ಕೂಡ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ’ ಎಂದು ಟೀಕಿಸಿದ್ದಾರೆ.
ಕಳೆದ ವಾರ ಪ್ರಧಾನಿ ಮೋದಿ ಗಡಿ ಬಿಕ್ಕಟ್ಟಿನ ವಿಚಾರವಾಗಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ‘ಯಾರೂ ದೇಶದ ಗಡಿ ಒಳಗೆ ನುಸುಳಿಲ್ಲ’ ಎಂದು ಮೋದಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೇ ಹೇಳಿಕೆಯನ್ನು ಬಳಸಿಕೊಂಡು ಚೀನಾ ‘ಯಾರೂ ಭಾರತದ ಗಡಿಯೊಳಗೆ ನುಸುಳಿಲ್ಲ ಎಂದ ಮೇಲೆ, ಚೀನಾ ಗಡಿಯೊಳಗೆ ಭಾರತೀಯ ಸೇನೆ ನುಗ್ಗಿದೆ, ಘರ್ಷಣೆಗೆ ಭಾರತವೇ ಕಾರಣ’ ಎಂದು ತಿರುಗೇಟು ನೀಡಿತ್ತು.
ಇದನ್ನೂ ಓದಿ: “ಭಾರತ – ಚೀನಾ ಘರ್ಷಣೆಯ ಬಗ್ಗೆ ಮೋದಿ ಹೇಳಿಕೆ ಸರಿಯಾಗಿದೆ…ಆದರೆ ಮೋದಿ ಸರ್ಕಾರವೇ ಘರ್ಷಣೆ ಗೆ ಕಾರಣವೂ ಆಗಿದೆ”
ಇದೆಲ್ಲದ ಬೆನ್ನಲ್ಲೇ, ಸತತ ಸಭೆಗಳ ನಂತರ ಚೀನಾ ತನ್ನ ಸೈನಿಕರನ್ನು ವಾಪಸ್ ತೆಗೆದುಕೊಂಡಿದೆ. ಈ ಬಗ್ಗೆ ಬಿಎಲ್ ಸಂತೋಷ್ ಟ್ವೀಟ್ ಮಾಡಿದ್ದರು. ಅದನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿಎಸ್ ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನ ಮಂತ್ರಿ ಎಂದು ಹೇಳಿದ್ದಾರೆ. ಅಲ್ಲದೆ, ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂಪ್ರಧಾನಿ ತಿಳಿಸಲಿ ಎಂದು ಟ್ವೀಟ್ನಲ್ಲಿ ವ್ಯಂಗ್ಯವಾಡಿದ್ದಾರೆ.
ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು @blsanthosh ಅವರೇನು ರಕ್ಷಣಾ ಸಚಿವರೇ,
ಇಲ್ಲವೇ ಸೇನಾ ಮುಖ್ಯಸ್ಥರೇ?ಈ ಹೇಳಿಕೆ ನೀಡಬೇಕಾಗಿರುವುದು @PMOIndia.
ಅವರಿಂದ ಹೇಳಿಕೆ ಕೊಡಿಸಿ.
ಚೀನಾ ಒಳ ನುಸುಳಿಲ್ಲ ಎಂದಾದರೆ,
ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ.
3/4— Siddaramaiah (@siddaramaiah) July 7, 2020
ಇನ್ನು, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದು, ಅಧಿಕಾರಿಗಳ ಜೊತೆಗೆ ಒಂದೂ ಸಭೆಯನ್ನು ನಡೆಸಿಲ್ಲ. ಕಾಂಗ್ರೆಸ್ ಕೊರೊನಾ ಪರಿಹಾರಕ್ಕೆ ನೀಡಿರುವ 01 ಕೋಟಿಗೆ ಲೆಕ್ಕ ಕೊಡಬೇಕು ಎಂದು ಬಿಲ್ ಸಂತೋಷ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಸಿರುವ ಸಿದ್ದರಾಮಯ್ಯ, ಆರೆಸ್ಸೆಸ್ ನಾಯಕ ಬಿಎಲ್ ಸಂತೋಷ್ ಅವರು ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ ಎಂದಿದ್ದಾರೆ.
ಅಲ್ಲದೆ, ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ನಾವು ಕೊಡುತ್ತೇವೆ. ಅದಕ್ಕೂ ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ಪ್ರಧಾನಿ ನರೇಂದ್ರ ಮೋದಿಯವರು ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದಪ್ಪ ಚರ್ಮದ ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ: ಸಿದ್ದರಾಮಯ್ಯ
ಇದನ್ನೂ ಓದಿ: ಅಬಕಾರಿ ಸುಂಕ 18 ಲಕ್ಷ ಕೋಟಿಯನ್ನು ಮೋದಿ ಸರ್ಕಾರ ಲೂಟಿ ಹೊಡೆದಿದೆ: ಸಿದ್ದರಾಮಯ್ಯ

