ಭಾರತದ ಜೊತೆ ಚೀನಾ ಸಂಘರ್ಷಕ್ಕಿಳಿದರೆ, ಅಮೆರಿಕಾ ಭಾರತವನ್ನು ಬೆಂಬಲಿಸಲಿದೆ: ಮಿಡೋವ್ಸ್ ಮಾರ್ಕ್

ಭಾರತದ ಮೇಲೆ ಚೀನಾ ಆಕ್ರಮಣ ನಡೆಸುವಂತಹ ಸನ್ನಿವೇಶಗಳ ಎದುರಾಗಿ, ಉಭಯ ರಾಷ್ಟ್ರಗಳ ನಡುವೆ ಯುದ್ದದ ವಾತಾವರಣ ಷೃಷ್ಟಿಯಾದರೆ ಅಮೆರಿಕಾ ಸೇನೆ ಭಾರತಕ್ಕೆ ಬೆಂಬಲಿಸಲಿದೆ ಎಂದು ಅಮೆರಿಕಾ ಶ್ವೇತಭವನದ ಚೀಫ್ ಆಫ್ ಸ್ಟಾಫ್ ಮಾರ್ಕ್ ಮಿಡೋವ್ಸ್ ಅವರು ಹೇಳಿದ್ದಾರೆ.

ನಮ್ಮ ನಿರ್ಧಾರ ಸ್ಪಷ್ಟವಾಗಿದ್ದು, ನಮ್ಮ ಸಂದೇಶವೂ ಸ್ಪಷ್ಟವಾಗಿದೆ. ಚೀನಾ ಅಥವಾ ಇನ್ನಾವುದೇ ದೇಶವಾದರೂ ಸರಿಯೇ ದಕ್ಷಿಣ ಚೀನಾ ಸಮುದ್ರ  ಮತ್ತು  ಇತರ ಪ್ರದೇಶಗಳ ಮೇಲೆ ತಮ್ಮ ಪ್ರಾಬಲ್ಯ ಸಾಧಿಸಲು ಮುಂದಾದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಮಾರ್ಕ್ ಹೇಳಿದ್ದಾರೆ.

ಅಮೆರಿಕಾ ನೌಕಾಪಡೆಯ ಎರಡು ಯುದ್ಧನೌಕೆಗಳನ್ನು ದಕ್ಷಿಣ ಚೀನಾ ಸಮುದ್ರದಲ್ಲಿ ಯುಎಸ್‌ ನಿಯೋಜನೆ ಮಾಡಿದ್ದು, ಇದರ ಬೆನ್ನಲ್ಲೇ ಮಿಡೋವ್ಸ್‌ ಮಾರ್ಕ್ ಅವರು ಹೇಳಿಕೆ ನೀಡಿದ್ದಾರೆ.

ಈಗಾಗಲೇ ಚೀನಾ ವಿರುದ್ಧ ಕತ್ತಿ ಮಸೆಯುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ದ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಚೀನಾಕ್ಕೆ ಸಂಬಂಧಿಸಿದ ಹಲವು ಮಹತ್ವದ ಆದೇಶಗಳಿಗೆ ಟ್ರಂಪ್ ಅಂಕಿತ ಹಾಕಲಿದ್ದಾರೆ ಎಂಬ ಸುಳಿವನ್ನು ಮಾರ್ಕ್ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights