ಧೋನಿ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್‌ ಕೊಟ್ಟ ಹಾರ್ದಿಕ್‌ ಮತ್ತು ಕೃನಾಲ್‌ ಪಾಂಡ್ಯ

Social media ದಲ್ಲಿ ಕ್ರಿಕೆಟ್ ಸುದ್ದಿ ಸಕ್ಕತ್ ವೈರಲ್ ಆಗುತ್ತಿದೆ… ಅದು ಹಾರ್ಧಿಕ್​ ಮತ್ತು ಕೃನಾಲ್​ ಪಾಂಡ್ಯ ಸಹೋದರರು ಮತ್ತು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿಗೆ ಸಂಭದ್ದಪಟ್ಟದ್ದಾಗಿದೆ..  ಪ್ರೀತಿಪಾತ್ರರಾದವರ ಬರ್ತ್​ಡೇಗೆ ನೀವೇನು ಮಾಡಬಹುದು. ಹತ್ತಿರದಲ್ಲಿ ಇದ್ದರೆ ಒಂದು ಕೇಕ್ ತೆಗೊಂಡು ಹೋಗಿ ವಿಷ್​ ಮಾಡಬಹುದು. ಟೈಮ್​ ಸರಿಯಾಗಿ ಇದ್ರೆ ಅವರ ಜೊತೆ ಒಂದು ಟ್ರಿಪ್​​ ಹೋಗಬಹುದು. ಆದರೆ ಈಗ ಕೊರೊನಾ ಕಾಲ. ಯಾರ ಟೈಮ್​ ಕೂಡ ಸರಿಯಾಗಿಲ್ಲ. ಬರ್ತ್​ ಡೇ ಆಗಲಿ, ಮದ್ವೆನೇ ಆಗ್ಲಿ ಮನೆಯಿಂದ ಹೊರಬಂದ್ರೆ ಅಪಾಯ ಗ್ಯಾರೆಂಟಿ. ​ ಇಂತಹದ್ದರಲ್ಲೂ ತಮ್ಮ ಪ್ರೀತಿಯ ಕ್ರಿಕೆಟರ್​ ಮಹೇಂದ್ರ ಸಿಂಗ್​ ಧೋನಿಗೆ ವಿಷ್​ ಮಾಡಲು 1500 ಕಿಲೊಮೀಟರ್​ ಪ್ರಯಾಣ ಮಾಡಿದ ಕ್ರಿಕೆಟಿಗರಿದ್ದಾರೆ..!

ಮಹೇಂದ್ರ ಸಿಂಗ್​ ಧೋನಿ ಅಂದ್ರೆ ಅದೆಷ್ಟೋ ಜನರಿಗೆ ರೋಲ್​ ಮಾಡೆಲ್​. ಕೆಲವು ಕ್ರಿಕೆಟಿಗರಿಗಂತೂ ಗಾಡ್​ ಫಾದರ್​ಗಿಂತ ಒಂದು ಕೈ ಮೇಲೆಯೇ. ಅದರಲ್ಲಿ ಹಾರ್ಧಿಕ್​ ಮತ್ತು ಕೃನಾಲ್​ ಪಾಂಡ್ಯ ಸಹೋದರರಿಗೆ ಮಾಹಿ ಮೇಲೆ ಅತೀವ ಪ್ರೀತಿ. ಜುಲೈ 7ರಂದು ಧೋನಿ 39ನೇ ಹುಟ್ಟುಹಬ್ಬ ಆಚರಿಸಿಕೊಂಡ್ರು. ಮಾಹಿಗೆ ಅಚ್ಚರಿ ಎಂಬಂತೆ ಪಾಂಡ್ಯಾ ಸಹೋದರರು ಧೋನಿ ಮನೆಯ ಮುಂದೆ ಬಂದು ನಿಂತಿದ್ದರು. ಅಷ್ಟೇ ಅಲ್ಲ ತಾವೇ ತಯಾರಿಸಿಕೊಂಡು ಬಂದಿದ್ದ ಕೇಕ್​​ ಅನ್ನು ಧೋನಿ ಕೈಯಿಂದಲೇ ಕಟ್​ ಮಾಡಿಸಿ ಸಂಭ್ರಮಿಸಿದ್ರು.

ಅಂದಹಾಗೇ ಮಹೇಂದ್ರ ಸಿಂಗ್​ ಧೋನಿ ತಮ್ಮ ರಾಂಚಿಯ ಫಾರ್ಮ್​ ಹೌಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಾಂಡ್ಯಾ ಸಹೋದರರು ವಡೋದರಾದಲ್ಲಿದ್ದರು. ವಡೋದರಾದಿಂದ 1500 ಕಿಲೋಮೀಟರ್​ ದೂರದ ರಾಂಚಿಗೆ ಸ್ಪೆಷಲ್​ ಫ್ಲೈಟ್​ ಮಾಡಿಕೊಂಡು ಬಂದು ಧೋನಿಗೆ ವಿಷಷ್​ ಹೇಳಿದ್ದಾರೆ. ಕೃನಾಲ್​ ಮತ್ತು ಹಾರ್ಧಿಕ್​​ ಪ್ರೀತಿ ನೋಡಿ ಮಾಹಿಗೆ ಮಾತೇ ಬರಲಿಲ್ಲ.

https://www.instagram.com/p/CCV5xOgpn7B/

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights