ಮತ್ತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಮರಳಿದ ದೀಪಿಕಾ ಪಡುಕೋಣೆ; ಯಾವುದು ಆ ಸಿನಿಮಾ ಗೊತ್ತಾ?

ಸ್ಯಾಂಡಲ್‌ವುಡ್‌ ಸಿನಿಮಾ ಅಂಗಳದಲ್ಲಿ ಒಂದೇ ಒಂದು ಸಿನಿಮಾ ಮಾಡಿ ಬಾಲಿವುಡ್‌ಗೆ ಜಿಗಿದು ಸ್ಟಾರ್‌ ನಟಿಯಾಗಿ ಬೆಳೆದ ದೀಪಿಕಾ ಪಡುಕೋಣೆ ಮತ್ತೆ ಸೌತ್‌ಇಂಡಿಯಾ ಇಂಡಸ್ಟ್ರಿಯ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಜೊತೆ ಕನ್ನಡದ ‘ಐಶ್ವರ್ಯ’ ಚಿತ್ರದಲ್ಲಿ. ನಂತರ, ರಜನಿಕಾಂತ್‌ ಜೊತೆಗೆ ತಮಿಳು ಸಿನಿಮಾ ಕೊಡಚಿಯಾನ್ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಮೊದಲ ಬಾರಿಗೆ ಟಾಲಿವುಡ್‌ಗೆ ದೀಪಿಕಾ ಮರಳಿದ್ದಾರೆ.

ಪ್ರಭಾಸ್ ಹಾಗೂ ನಿರ್ದೇಶಕ ನಾಗ್‌ ಅಶ್ವಿನ್ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಘೋಷಣೆ ಆಗಿತ್ತು. ಆ ಸಿನಿಮಾಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ದೀಪಿಕಾ ಹೆಸರು ಚಾಲ್ತಿಯಲ್ಲಿದ್ದರೂ, ಚಿತ್ರತಂಡ ಅದನ್ನು ಖಚಿತಪಡಿಸಿರಲಿಲ್ಲ. ಈಗ ಎಲ್ಲವೂ ಅಧಿಕೃತಗೊಂಡಿದ್ದು, ಈ ವಿಚಾರವನ್ನು ವೈಜಯಂತಿ ಮೂವೀಸ್‌ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಬಹಿರಂಗಪಡಿಸಿದೆ. ಆದರೆ, ಸಿನಿಮಾ ಟೈಟಲ್‌ ಇನ್ನೂ ಬಹಿರಂಗಗೊಂಡಿಲ್ಲ.

https://twitter.com/VyjayanthiFilms/status/1284725393501458437?s=20

ಸಿನಿಮಾ  2021ರಲ್ಲಿ ಸೆಟ್ಟೇರಲಿದೆ. ಸದ್ಯ, ಪ್ರಭಾಸ್ ‘ರಾಧೆ ಶ್ಯಾಮ್’ ಸಿನಿಮಾದ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ. ಅಲ್ಲದೆ,  ದೀಪಿಕಾ ಅಭಿನಯಿಸಿ, ನಿರ್ಮಿಸಿರುವ ’83’ ಚಿತ್ರವು ಕೂಡ ತೆರೆಗೆ ಸಿದ್ಧವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights