ಮುಂಬೈಯಲ್ಲಿ ಇಂದು ಭಾರಿ ಮಳೆ : ಜಲಾವೃತ ಪ್ರದೇಶಗಳಿಗೆ ಹೋಗದಿರಲು ಸೂಚನೆ

ಮುಂಬೈಯಲ್ಲಿ ಇಂದು ಭಾರಿ ಮಳೆಯಾಗುತ್ತಿದ್ದು ‘ಆರೆಂಜ್’ಅಲರ್ಟ್ ಘೋಷಿಸುವುದರೊಂದಿಗೆ ಜಲಾವೃತ ಪ್ರದೇಶಗಳಿಗೆ ಹೋಗದಿರಲು ಸೂಚನೆ ನೀಡಲಾಗಿದೆ.

ಮುಂಬೈಯ ಅನೇಕ ಭಾಗಗಳಲ್ಲಿ ಇಂದು ಬೆಳಿಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಿಗೆ ನೀರು ನೂಗ್ಗಿದೆ. ಇಂದು ದಿನವಿಡೀ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ನಗರದ ನಾಗರಿಕ ಸಂಸ್ಥೆ ನಿವಾಸಿಗಳಿಗೆ “ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಮತ್ತು ತೀರದಿಂದ ದೂರವಿರಲು” ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಾತ್ರವಲ್ಲದೆ ನಗರಕ್ಕೆ ‘ಆರೆಂಜ್’ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಹೊರಡಿಸಿದ್ದು, ಇಂದು ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಮಹಾರಾಷ್ಟ್ರದ ಥಾಣೆ, ಪಾಲ್ಘರ್ ಮತ್ತು ಇತರ ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

“ಇಂದು ಮುಂಬೈ, ಥಾಣೆ ಸೇರಿದಂತೆ ಕೊಂಕಣದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ (200 ಮಿ.ಮೀ ಗಿಂತ ಹೆಚ್ಚು) …” ಎಂದು ಮುಂಬೈನ ಇಂಡಿಯಾ ಮೆಟ್ ವಿಭಾಗದ ಹವಾಮಾನಶಾಸ್ತ್ರ ಉಪ ಮಹಾನಿರ್ದೇಶಕ ಕೆ.ಎಸ್.ಹೋಸಾಲಿಕರ್ ಟ್ವೀಟ್ ಮಾಡಿದ್ದಾರೆ.

ತಗ್ಗು ಪ್ರದೇಶದಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಮುಂಬೈನ ಸ್ಯಾಂಟಾಕ್ರೂಜ್ ಹವಾಮಾನ ಬ್ಯೂರೋ ಪ್ರಕಾರ, ಮಂಗಳವಾರ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರವರೆಗೆ 86 ಮಿ.ಮೀ ಮಳೆಯಾಗಿದೆ ಮತ್ತು ಕೊಲಾಬಾ ನಿಲ್ದಾಣವು ಇದೇ ಅವಧಿಯಲ್ಲಿ 50 ಮಿ.ಮೀ ಮಳೆಯಾಗಿದೆ.

ಕೊಲ್ಹಾಪುರ, ಸತಾರಾ, ಔರಂಗಾಬಾದ್ ಮತ್ತು ಜಲ್ನಾ ಜಿಲ್ಲೆಗಳಲ್ಲಿ ಸಹ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಮುಂಬೈ ಮತ್ತು ಮಹಾರಾಷ್ಟ್ರ ಕರಾವಳಿಯಲ್ಲಿ ಈಶಾನ್ಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತವು ಚಲಿಸುತ್ತಿರುವುದರಿಂದ ಭಾರೀ ಮಳೆಯಾಗುತ್ತಿದೆ ಎಂದು ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ತಿಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights