ಸದಾ ಸುಳ್ಳುಗಳನ್ನೇ ಹೇಳುತ್ತಿದ್ದ ಡ್ರೋನ್ ಪ್ರತಾಪ್ ವಿರುದ್ಧ ದೂರು…

ಗೌರವದ ಉತ್ಪ್ರೇಕ್ಷೆಯಲ್ಲಿ ಸದಾ ಸುಳ್ಳುಗಳನ್ನೇ ಹೇಳುತ್ತಿದ್ದ ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಾಗಿದೆ. ಜೇಕಬ್‌ ಜಾರ್ಜ್ ಎನ್ನುವವರು, ನಗರ ಪೊಲೀಸ್ ಆಯುಕ್ತರಿಗೆ ಡ್ರೋನ್ ಪ್ರತಾಪ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಸಾಧನೆಯೆಂದು ಸುಳ್ಳು ಹೇಳಿಕೊಂಡು ಪ್ರತಾಪ್ ಸಾಕಷ್ಟು ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಕಿಸಿದ್ದಾರಂತೆ.

ಯೆಸ್, ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿರೋ ಹೆಸರು ಅಂದ್ರೆ ಅದು ಡ್ರೋನ್ ಪ್ರತಾಪ್. ತ್ಯಾಜ್ಯವಸ್ತುಗಳಿಂದಲೇ 600 ಡ್ರೋನ್ ತಯಾರಿಸಿದ್ದೇನೆ, 80 ದೇಶಗಳನ್ನ ಸುತ್ತಿ ಲೆಕ್ಚರ್‌ ಕೊಟ್ಟಿದ್ದಾನೆ. ಜಪಾನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ ಎಂದೆಲ್ಲಾ ಹೇಳಿ ಪ್ರಸಿದ್ಧನಾಗಿದ್ದ ಈತ, ಇತ್ತೀಚೆಗೆ ಬಟಾಬಯಲಾಗಿದ್ದಾನೆ.

ಖಾಸಗಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಾಪ್, ತನ್ನ ವಿರುದ್ಧದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲು ಪ್ರಯತ್ನಿಸಿದನಾದ್ರೂ, ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಮಕ್ಕಳ ಎದುರು ಮಾಡೋ ಭಾಷಣಗಳಲ್ಲಿ ಕಥೆ ಹೇಳುತ್ತಿದ್ದ ಈ ಡ್ರೋನ್ ಪ್ರತಾಪ್ ಉತ್ಪ್ರೇಕ್ಷೆಯಲ್ಲಿ ಕೆಲ ಸುಳ್ಳುಗಳನ್ನೂ ಹೇಳಿದ್ದಾಗಿ ಕ್ಷಮೆಯನ್ನೂ ಕೇಳಿದ್ದ. ಒಟ್ಟಿನಲ್ಲಿ ದುರಾಸೆಯಿಂದ ಸುದ್ದಿ ಮಾಡುತ್ತಲೇ ಹೋದ ಪ್ರತಾಪ್‌ಗೆ ಮುಂದಿನ ದಿನಗಳಲ್ಲಿ ಅದು ಏನೆಲ್ಲಾ ಕಾದಿದ್ಯೋ… ಕಾಲವೇ ಉತ್ತರಿಸಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

2 thoughts on “ಸದಾ ಸುಳ್ಳುಗಳನ್ನೇ ಹೇಳುತ್ತಿದ್ದ ಡ್ರೋನ್ ಪ್ರತಾಪ್ ವಿರುದ್ಧ ದೂರು…

  • September 14, 2020 at 1:12 pm
    Permalink

    Very quickly this website will be famous amid all blogging and site-building users, due to it’s good content

    Reply
  • September 14, 2020 at 1:12 pm
    Permalink

    I would like to thank you for the efforts you’ve put in writing this blog.

    I am hoping to check out the same high-grade content
    by you later on as well. In truth, your creative writing abilities has inspired me
    to get my own blog now 😉

    Reply

Leave a Reply

Your email address will not be published.

Verified by MonsterInsights