ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಕರಣ್, ಸಲ್ಮಾನ್, ಏಕ್ತಾ ಕಪೂರ್, ಸಂಜಯ್ ಗೆ ಬಿಗ್ ರಿಲೀಫ್!
ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯನ್ನು ವಜಾಗೊಳಿಸಲಾಗಿದ್ದು ಕರಣ್ ಜೋಹರ್, ಸಲ್ಮಾನ್ ಖಾನ್, ಏಕ್ತಾ ಕಪೂರ್ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೌದು… ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಾಲಿವುಡ್ ನ ಕರಣ್ ಜೋಹರ್, ಏಕ್ತಾ ಕಪೂರ್, ಸಂಜಯ್ ಲೀಲಾ ಭನ್ಸಾಲಿ, ಸಲ್ಮಾನ್ ಖಾನ್ ವಿರುದ್ಧ ದಾಖಲಾದ ಪ್ರಕರಣವನ್ನು ಬಿಹಾರ ಹೈಕೋರ್ಟ್ ವಜಾಗೊಳಿಸಿದೆ. ಜೂನ್ 14 ರಂದು ಸುಶಾಂತ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಸುಮಾರು ಮೂರು ದಿನಗಳ ನಂತರ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅರ್ಜಿಯಲ್ಲಿ ಕೆಲವರು ಸುಶಾಂತ್ ಅವರನ್ನು ಅನ್ಯಾಯದ ಮೂಲಕ ಖಿನ್ನತೆಗೆ ದೂಡಿದ್ದಾರೆ ಎಂದು ಆರೋಪಿಸಲಾಗಿದೆ.
ವಕೀಲರಾಗಿರುವ ಅರ್ಜಿದಾರರು, ಸಿಜೆಎಂಗಳ ನಿರ್ಧಾರವನ್ನು ಜಿಲ್ಲಾ ನ್ಯಾಯಾಲಯದ ಮುಂದೆ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅಂತಹ ತೀವ್ರ ಹೆಜ್ಜೆ ಇಡಲು ಒತ್ತಾಯಿಸಲ್ಪಟ್ಟ ‘ಖುಷಿಯ ಯುವಕ’ನಿಗೆ ನ್ಯಾಯ ದೊರಕುತ್ತದೆ ಎಂದಿದ್ದಾರೆ. ಜೊತೆಗೆ ಅನೇಕ ಅಭಿಮಾನಿಗಳು, ರಾಜಕಾರಣಿಗಳು ಮತ್ತು ಕೆಲವು ಸಹೋದ್ಯೋಗಿಗಳು ನಟನ ಸಾವಿನ ತನಿಖೆಯನ್ನು ಸಿಬಿಐ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

