ಫ್ಯಾಕ್ಟ್‌ಚೆಕ್: ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎಂದು ಡಿಜಿಟಲ್ ತಂತ್ರಜ್ಞಾನದಿಂದ ರಚಿಸಿದ ವಿಡಿಯೋ ಹಂಚಿಕೆ

ಅರಣ್ಯ ಪ್ರದೇಶದಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಈ ಪ್ರಾಣಿಯು ಅಪರೂಪ ಮತ್ತು ಅತೀ ವಿಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು,  InVID ಸಾಧನವನ್ನು ಬಳಸಿಕೊಂಡು ಕೀಫ್ರೇಮ್‌ಗಳಾಗಿ ವಿಂಗಡಿಸಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅದು ‘ವಿಷುಯಲ್ ಅಟೆಲಿಯರ್ 8’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ ‘ಟೋಬಿಯಾಸ್ ಗ್ರೆಮ್ಲರ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ವೊಂದು ಲಭ್ಯವಾಯಿತು.

ವೈರಲ್ ವಿಡಿಯೋದಲ್ಲಿ ಇರುವುದು ವಿಚಿತ್ರ ಪ್ರಾಣಿಯಲ್ಲ:

ವೈರಲ್ ವಿಡಿಯೋ ಬಗ್ಗೆ ಮತ್ತಷ್ಟು ವಿವರಣೆ ಪಡೆಯಲು  ಸರ್ಚ್ ಮಾಡಿದಾಗ ಟೋಬಿಯಾಸ್ ಗ್ರೆಮ್ಲರ್‌ ಅವರ Instagram ಪುಟದಲ್ಲಿ ವೈರಲ್ ವಿಡಿಯೊದ ವಿಸ್ತೃತ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ವಿಡಿಯೊಗೆ ‘ಅರಣ್ಯದಲ್ಲಿ’ ಎಂಬ ಶೀರ್ಷಿಕೆ ನೀಡಲಾಗಿದೆ. ಹಾಗಾಗಿ ಇದು ಅಪರೂಪವೂ ಅಲ್ಲ ವಿಚಿತ್ರವೂ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಟೋಬಿಯಾಸ್ ಎಂಬ ವ್ಯಕ್ತಿಯು ಡಿಜಿಟಲ್ ಕಲಾವಿದನಾಗಿದ್ದು, ವೈರಲ್ ವಿಡಿಯೋದಲ್ಲಿ ನಾವು ನೋಡುತ್ತಿರುವ ವಿಚಿತ್ರ ಪ್ರಾಣಿಯ ಆಕಾರವನ್ನು ಡಿಜಿಟಲ್ ಆರ್ಟ್ ಮೂಲಕ ರಚಿಸಲಾಗಿದೆ. ಇದೊಂದು ಕಾಲ್ಪನಿಕ ಪ್ರಾಣಿಯಾಗಿದ್ದು ಟೋಬಿಯಾಸ್ ತಾನು ರಚಿಸಿದ ಈ ವಿಡಿಯೋವನ್ನು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅಪ್‌ಲೋಡ್ ಮಾಡಿದಾನೆ. ನೀವು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಡಿಜಿಟಲ್ ದೃಶ್ಯ ಕಲಾವಿದ ಟೋಬಿಯಾಸ್ ಗ್ರೆಮ್ಲರ್ ತಾನು ಕಾಲ್ಪನಿಕವಾಗಿ ವಿನ್ಯಾಸಗೊಳಿಸಿ, ತನ್ನ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಪ್ರಾಣಿಯ ವಿಡಿಯೊ ಕ್ಲಿಪ್ ಅನ್ನು, ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಚಿತ್ರ ಪ್ರಾಣಿಯ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಹೆಸರಿನಲ್ಲಿ ಹರಿದಾಡುತ್ತಿರುವುದು ನಕಲಿ ಪತ್ರ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights