ಚೀನಾದ ಹಪಾಹಪಿಗೆ ನಿಜವಾದ ಕಾರಣ ಬಯಲು ಮಾಡಿದ ರಾಹುಲ್ ಗಾಂಧಿ…
ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ಗೆ ಪರ್ಯಾಯವಾಗಿ ಜನ್ ಕಿ ಬಾತ್ ಶುರು ಹಚ್ಚಿಕೊಂಡಿರುವ ರಾಹುಲ್ ಗಾಂಧಿ ಚೀನಾ ಉಪದ್ವ್ಯಾಪದ ಕಾರಣ ತೆರೆದಿಟ್ಟಿದ್ದಾರೆ.
ಕೊರೋನಾ ನಿರ್ವಹಣೆ ಮತ್ತು ಲಡಾಖ್ ಸಂಘರ್ಷದ ವಿಚಾರವಾಗಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ನಿರತಂರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮದೇ ಆದ ಮನ್ ಕಿ ಬಾತ್ ಆರಂಭಿಸಿದ್ದಾರೆ.
ಆ ಮೂಲಕ ಗಡಿಯಲ್ಲಿ ಭಾರತೀಯ ಯೋಧರ ಬಲಿ ಪಡೆದು ಕಿರಿಕಿರಿ ಮಾಡುತ್ತಿರುವ ಚೀನಾದ ಹಪಾಹಪಿಗೆ ನಿಜವಾದ ಕಾರಣ ಬಯಲಾಗಿದೆ. ಪೂರ್ವ ಲಡಾಖ್’ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ನಡೆಸಿದ ದಾಳಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ತೀವ್ರ ಸಂತಾಪ ಸೂಚಿಸಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚೀನೀ ಮಸಲತ್ತಿನ ಅಸಲಿಯತ್ತು ಬಿಚ್ಚಿಟ್ಟಿದ್ದಾರೆ.
ಕುಸಿದ ಆರ್ಥೀಕತೆ, ನೆರೆಹೊರೆಯ ಅವಿಶ್ವಾಸ ಮತ್ತು ದಿಕ್ಕು ತಪ್ಪಿದ ವಿದೇಶಾಂಗ ನೀತಿಯ ಕಾರಣ ಚೀನಾ ತನ್ನ ಪೊಗರು ತೋರಲು ಮುಂದಾಯಿತು ಎಂದು ರಾಹುಲ್ ಗಾಂಧಿ ವಿಶ್ಲೇಷಣೆ ಮಾಡಿದ್ದಾರೆ.
20140ರಲ್ಲಿ ಅಧಿಕಾರಕ್ಕೆ ಬಂದ ತರುವಾಯ ಮೋದಿ ಸರಕಾರದ ತಪ್ಪು ಹೆಜ್ಜೆಗಳು, ಮುಸುಕು ನೀತಿಗಳಿಂದಾಗಿ ಭಾರತದ ಬುಡಕ್ಕೇ ಪೆಟ್ಟು ಬಿದ್ದಿದೆ ಎಂದು ರಾಹುಲ್ ಗಾಂಧಿ ಗಂಭೀರವಾದ ಆರೋಪ ಮಾಡಿದ್ದಾರೆ.

