ವೈದ್ಯಕೀಯ ತಜ್ಞರೊಂದಿಗಿನ ಸಭೆಯಲ್ಲಿ ವೈದ್ಯರು ನೀಡಿದ ಸಲಹೆಗಳು!

ಪ್ರಕರಣಗಳು ದಿನದಿಂದ ದಿನಕ್ಕೆ ತೀವ್ರ ಹೆಚ್ಚಾಗುತ್ತಿದೆ. ಇದು ಬಹಳ ಆತಂಕಕಾರಿ ವಿಷಯ. ಬೇರೆ ನಗರಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಕಡಿಮೆ ಇವೆ. ಆದರೂ ನಾವು ಕೈ ಕಟ್ಟಿ ಕುಳಿತು ಕೊಳ್ಳುವಂತಿಲ್ಲ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ವೈದ್ಯಕೀಯ ತಜ್ಞರೊಂದಿಗಿನ ಸಭೆಯಲ್ಲಿ ಸೂಚಿಸಿದರು.

ತಜ್ಞ ವೈದ್ಯರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಏಕಾಏಕಿ ಬೆಂಗಳೂರಲ್ಲಿ ಪ್ರಕರಣ ಜಾಸ್ತಿ ಆಗ್ತಿರೋದು ಆತಂಕ ತಂದಿದೆ. ಇಂತಹ ಸಂದರ್ಭದಲ್ಲಿ ತಜ್ಜರಾದ ನಿಮ್ಮ ಸಲಹೆಗಳು ಸರ್ಕಾರಕ್ಕೆ ಅತ್ಯಗತ್ಯ. ನಿಮ್ಮ ಸಲಹೆಗಳಿಂದ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲು ಸಹಕಾರಿ ಆಗಲಿದೆ ಎಂದು ಮನವಿ ಮಾಡಿದರು.

ಸಿಎಂ ಯಡಿಯೂರಪ್ಪ ಬುಧವಾರ ತಜ್ಞ ವೈದ್ಯರ ಜೊತೆ ಕೊವೀಡ್ ನಿರ್ವಹಣೆ ಕುರಿತು ಸಭೆ ನಡೆಸಿದರು. ತಜ್ಞ ವೈದ್ಯರ ಬಳಿ ಕೋವಿಡ್​ ನಿರ್ವಹಣೆಯ ಬಗ್ಗೆ ಚರ್ಚೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಆಕ್ರಮಣವನ್ನು ತಡೆಯಲು ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನುವ ಬಗ್ಗೆ ಚರ್ಚಿಸಲಾಯಿತು.

ಕೊರೊನಾ ದಿಂದ ಜನರು ತುಂಬಾ ಭಯ ಪಟ್ಟುಕೊಂಡಿದ್ದಾರೆ. ತೀವ್ರ ರೋಗ ಲಕ್ಷಣ ಇರೋರಿಗೆ ಅಗತ್ಯ ಚಿಕಿತ್ಸೆ ಕೊಡಲು ಸಲಹೆ ನೀಡುತ್ತಿದ್ದೇವೆ. ಎ ಸಿಮ್ಟಾಮೆಟಿಕ್ ರೋಗಿಗಳನ್ನು ಮನೆಯಲ್ಲೇ ಇರಿಸಬೇಕು. ಅವರನ್ನು ಮನೆಯಲ್ಲಿರಿಸಿದ್ರೆ ಉಳಿದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ. ಬಿ ಮತ್ತು ಸಿ ಸಿಮ್ಟಮ್ಯಾಟಿ ಕ್ ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗಲಿದೆ.

 – ಸುದರ್ಶನ್ ಬಲ್ಲಾಳ್, ತಜ್ಞವೈದ್ಯ

ಕೊರೋನಾ ಬಗ್ಗೆ ಯಾರು ಹೆದರಬೇಡಿ. ಎ ಸಿಮ್ಟಾಮೆಟಿಕ್ ನವರಿಂದ ಬೆಡ್ ಸ್ವಲ್ಪ ಕೊರತೆ ಉಂಟಾಗಿದೆ. ಅವರನ್ನು ಮನೆಯಲ್ಲೇ ಇರಿಸಿದ್ರೆ ಉಳಿದವರಿಗೆ ಬೆಡ್ ಗಳು ಸಿಗಲಿದೆ. ಕೊರೊನಾ ಸೋಂಕಿತರನ್ನು ಅಗತ್ಯ ಚಿಕಿತ್ಸೆ ಯೊಂದಿಗೆ ಗುಣ ಮುಖರಾಗಬಹುದು

– ಡಾ ಶರಣ ಪಾಟೀಲ್ , ತಜ್ಞ ವೈದ್ಯರು

ಕೊರೊನಾ ವೈರಸ್ ನಿವಾರಣೆ ಮಾಡುವುದಕ್ಕೆ ಎಲ್ಲಾ ದೇಶಗಳು ಹೇಗೆ ಪ್ರಿಕಾಶನ್ ತೆಗೆದುಕೊಂಡಿದ್ದಾರೆ ಎಂದು ನೋಡಿಕೊಂಡು ಕೆಲಸ ಮಾಡಬೇಕು. ಸರ್ಕಾರ ಹೇಳುವ ರೀತಿಯಲ್ಲಿ ಕೆಲಸ ಮಾಡಬೇಕು.ಮೀಡಿಯಾಗಳನ್ನು ನೋಡಿ ಹಿರಿಯ ಪೇಶೆಂಟ್ ಹೆದರುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಗುಣವಾದವರು ಇದ್ದಾರೆ ಅವರ ಬಗ್ಗೆ ಕೂಡ ಮಾಹಿತಿ ನೀಡಬೇಕು ಎಂದು ತಜ್ಞ ವೈದ್ಯರು ಸಭೆಯ ಬಳಿಕ ಮಾಹಿತಿ ನೀಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights