ಬೆಳ್ಳಂಬೆಳಿಗ್ಗೆ ಒಂದು ಕಪ್ ಬಿಸಿ ಬಿಸಿ ಕಾಫಿ ಜೊತೆ ಫಾಗ್ ನೋಡಿದರೆ ಹೇಗಿರುತ್ತೆ ಡೇ..?

ತಣ್ಣನೆಯ ಗಾಳಿ, ಹೊಳೆಯುವ ಇಬ್ಬನಿ, ಮೈಸೋಕುವ ಮಂಜು, ಎತ್ತ ನೋಡಿದರೂ ಮೋಡ ಕವಿದ ವಾತಾವರಣ. ಬೆಚ್ಚಗಿನ ಕಾಫಿ-ಟೀ ಕುಡಿದುಕೊಂಡು, ಚಳಿಯನ್ನ ಫೀಲ್ ಮಾಡ್ಕೊಳ್ತಾಯಿದ್ದರೆ.. ಅಬ್ಬಾ.. ಅದನ್ನ ಪದಗಳಿಂದ ವರ್ಣನೆ ಮಾಡೋದು ಕಷ್ಟ. ನಾವು ಯಾವುದೋ ಹಿಮಬೀಳುವ ಪ್ರದೇಶದ ಬಗ್ಗೆ ಮಾತನಾಡುತ್ತಿಲ್ಲ. ಸಿಲಿಕಾನ್ ಸಿಟಿಯ ರಮಣೀಯ ಸೌಂದರ್ಯದ ಬಗ್ಗೆ ಹೋಳ್ತಾಯಿದಿವಿ. ಹೌದು.. ಇತ್ತೀಚೆಗೆ ಬೆಂಗಳೂರಿನ ವಾತಾವರಣ ಮನಸ್ಸಿಗೆ ಮೃದ ನೀಡುತ್ತಿದೆ. ವಾರಾಂತ್ಯಗಳಲ್ಲಿ ಚಳಿಗಾಲಕ್ಕೆ ಮಂಜು ಬೀಳುವ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ಜನರಿಗೆ ಬೆಂಗಳೂರೇ ಖುಷಿ ನೀಡುತ್ತಿರುವುದು ಆಶ್ಚರ್ಯ.

ಹೌದು.. ನೆರೆಯ ರಾಜ್ಯಗಳ ಹವಮಾನದ ಪ್ರಭಾವವೋ..? ಅತೀ ಹೆಚ್ಚು ಮಳೆಯ ಪರಿಣಾಮವೋ..? ಬಿಸಿಲಿನ ಬೇಗೆಯೋ..? ಗೊತ್ತಿಲ್ಲ. ಈ ಬಾರಿ ಬೆಂಗಳೂರಿನಲ್ಲಿ ಚಳಿಗಾಲ ವಿಪರೀತ ಮಂಜಿನಿಂದ ಕೂಡಿದೆ. ಬೆಳಗಿನ ಜಾವ ವಾಯು ವಿಹಾರಕ್ಕೆಂದು ಬರುವ ಜನರು ಈ ವಾತವರಣವನ್ನು ಎಂಜಾಯ್ ಮಾಡ್ತಾಯಿದ್ದಾರೆ. ಇನ್ನೂ ಬೆಳಗಿನ ಜಾವ ಕೆಲಸಕ್ಕೆ ತೆರಳುವ ಮಂದಿ ಅಡಿಯಿಂದ ಮುಡಿವರೆಗೆ ಬೆಚ್ಚಗಿನ ಉಡುಪುಗಳನ್ನ ಧರಿಸಿಕೊಂಡೇ ಹೊರಗಿಡುತ್ತಿದ್ದಾರೆ.

ಬೆಳಿಗಿನ ಜಾವ ಐದು ಆರಾದರೆ ಸಾಕು ನಗರದಲ್ಲಿ ಕಣ್ತುಂಬಿಕೊಳ್ಳುವ ಅತ್ಯಾಕರ್ಷಕ ಮಂಜು ಹರಡಿಕೊಂಡಿರುತ್ತದೆ. ಈ ಇಬ್ಬನಿಯನ್ನ ನೋಡಲೆಂದು ನಗರವಾಸಿಗಳು ರಸ್ತೆಗಿಳಿಯುತ್ತಿರುವುದು ನಗರದಾದ್ಯಂತ ಸಾಮಾನ್ಯವಾಗಿದೆ. ಪಾರ್ಕ್, ಗ್ರೌಂಡ್ಸ್, ರೋಡ್ ಅಂತ ಸುತ್ತಾಡ್ತಾ ಮೋಡದಲ್ಲಿ ತೇಲಾಡುವ ಅನುಭವ ಪಡೆದುಕೊಳ್ಳುತ್ತಿದ್ದಾರೆ.

ಸೋ ನೀವೇನಾದರು ಇಂಥದೊಂದು ಪರಿಸರವನ್ನು ಕಣ್ತುಂಬಿಕೊಳ್ಳಬೇಕು ಅಂದರೆ ನಗರದಲ್ಲೇ ಅದಕ್ಕೆ ಅವಕಾಶವಿದೆ. ವಾರಾಂತ್ಯಗಳಲ್ಲಿ ಮಂಜು ತುಂಬಿದ ಸ್ಥಳಗಳನ್ನು ನೋಡಲು ಬೇರೆ ಕಡೆಗೆ ಪ್ರಯಾಣ ಮಾಡುವಂತರು ನಗರದಲ್ಲೇ ಬೆಳ್ಳಂಬೆಳಿಗ್ಗೆ ಫಾಗ್ ನೋಡಿ ಎಂಜಾಯ್ ಮಾಡಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights