ತ್ರಿಪುರ: ಆಟವಾಡಲು ಕರೆದು 8ರ ಬಾಲಕಿ ಮೇಲೆ ಅತ್ಯಾಚಾರವ್ಯಸಗಿದ 6 ಹದಿಹರೆಯದವರು

ಆಟವಾಡಲು ಕರೆದು 8 ವರ್ಷದ ಬಾಲಕಿ ಮೇಲೆ 6 ಹದಿಹರೆಯದ ಬಾಲಕರು ಅತ್ಯಾಚಾರವ್ಯಸಗಿದ ಘಟನೆಯೊಂದು ಪಶ್ಚಿಮ ತ್ರಿಪುರ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಾಚಾರವೆಸಗಿದ ಪಶ್ಚಿಮ ತ್ರಿಪುರ ಜಿಲ್ಲೆಯ ತಬರಿಯಾ ನಿವಾಸಿಗಳಾದ 6 ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಇವರಲ್ಲಿ ನಾಲ್ವರನ್ನು ಬಾಲಾಪರಾಧಿ ಮನೆಗೆ ಕಳುಹಿಸಲಾಗಿದೆ. 12 ವರ್ಷ ವಯಸ್ಸಿನ ಇತರ ಇಬ್ಬರಿಗೆ ಕೊರೊನಾ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

“ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಆರೋಪಿ ಹುಡುಗರು ಅವಳನ್ನು ಕರೆದರು. ನಂತರ ಅವಳ ಮೇಲೆ ಅತ್ಯಾಚಾರ ನಡೆಸಿದರು. ಈ ಘಟನೆ ಶುಕ್ರವಾರ ನಡೆದಿದೆ. 3 ನೇ ತರಗತಿ ವಿದ್ಯಾರ್ಥಿನಿ ಬಾಲಕಿ ಮನೆಗೆ ಮರಳಿದ್ದು, ಏನಾಯಿತು ಎಂದು ಪೋಷಕರಿಗೆ ತಿಳಿಸಿದ್ದಾಳೆ ” ಎಂದು ಹೇಳಿದ್ದಾರೆಂದು ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್‌ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಿಯಾ ಮಾಧುರಿ ಮಜುಂದರ್ ಹೇಳಿದರು.

ಬಾಲಕಿಗೆ ಪರಿಚಿತವಾಗಿರುವ ಆರೋಪಿ ಬಾಲಕರನ್ನು ಶನಿವಾರ ದೂರು ದಾಖಲಿಸಿದ ನಂತರ ಬಂಧಿಸಲಾಗಿದೆ.

“ಎಫ್ಐಆರ್ನಲ್ಲಿ ಒಟ್ಟು ಏಳು ಜನರನ್ನು ಹೆಸರಿಸಲಾಗಿದೆ. ಅವರಲ್ಲಿ ಆರು ಜನರನ್ನು ನಾವು ಬಂಧಿಸಿದ್ದೇವೆ ಮತ್ತು ಒಬ್ಬರು ಪರಾರಿಯಾಗಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights