Fact Check: ಲಡಾಕ್‌ನಲ್ಲಿ ಚೀನಾ ಆಕ್ರಮಿತ ಭೂ ಪ್ರದೇಶವನ್ನು ಪುನಃ ಪಡೆದುಕೊಂಡ ನಂತರ ಸೇನೆ ನೃತ್ಯ ಮಾಡಿ ರಂಜಿಸಿತ್ತೇ?

ಸೇನಾ ಸಿಬ್ಬಂದಿ ನೃತ್ಯ ಮಾಡುವ ವೀಡಿಯೊವನ್ನು, ಚೀನಾ ಸೈನ್ಯವು ಪೂರ್ವ ಲಡಾಕ್‌ನಲ್ಲಿ ಆಕ್ರಮಿಸಿಕೊಂಡಿದ್ದ ಭಾರತದ ಭೂ ಪ್ರದೇಶವನ್ನು ಪುನಃ ಪಡೆದುಕೊಂಡ ನಂತರ  ವಿಶೇಷ ಗಡಿನಾಡು ಪಡೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯ-ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಪೂರ್ವ ಲಡಾಕ್‌ನಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಭೂ ಪ್ರದೇಶವನ್ನು ಪುನಃ ಪಡೆದುಕೊಂಡ ನಂತರ ವಿಶೇಷ ಗಡಿನಾಡು ಪಡೆ (ಸ್ಪೆಷಲ್‌ ಫ್ರಾಂಟಿಯರ್ ಫೋರ್ಸ್) ಸಿಬ್ಬಂದಿ ನೃತ್ಯ ಮಾಡುತ್ತಿರುವ ವಿಡಿಯೋ.

ಸತ್ಯ: ರಕ್ಷಣಾ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2020 ರ ಆಗಸ್ಟ್ 29/30 ರ ರಾತ್ರಿ ಪೂರ್ವ ಲಡಾಕ್‌ನಲ್ಲಿ ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭಾರತದ ಭೂಪ್ರದೇಶದ ಒಳಗೆ ನುಗ್ಗುವುದನ್ನು ತಡೆದಿದೆ. ಆದರೆ, ಪೋಸ್ಟ್ ಮಾಡಿದ ವೀಡಿಯೊ 27 ಆಗಸ್ಟ್‌ 2020ಕ್ಕೂ ಮುಂಚಿನಿಂದ ಅಂತರ್ಜಾಲದಲ್ಲಿ ಇದೆ. ಆದ್ದರಿಂದ, ವೀಡಿಯೊ ಉಲ್ಲೇಖಿತ ಘಟನೆಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಯಾವುದೇ ನಿರ್ದಿಷ್ಟ ಫಲಿತಾಂಶಗಳು ಕಂಡುಬಂದಿಲ್ಲ. ಆದರೆ ಟಿಬೆಟಿಯನ್ ಧ್ವಜವನ್ನು ಹೋಲುವ ಧ್ವಜವನ್ನು ವೀಡಿಯೊದಲ್ಲಿ ಕಾಣಬಹುದು. ಆದ್ದರಿಂದ, ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಅದೇ ವೀಡಿಯೊದ ವಿಸ್ತೃತ ವಿಡಿಯೋ ಯೂಟ್ಯೂಬ್‌ನಲ್ಲಿ ಕಂಡುಬಂದಿದೆ. ಈ ವೀಡಿಯೊವನ್ನು 27 ಆಗಸ್ಟ್ 2020 ರಂದು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಇನ್ನೂ ಅನೇಕರು ಅದೇ ವೀಡಿಯೊವನ್ನು 27 ಆಗಸ್ಟ್ 2020 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ರಕ್ಷಣಾ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತೀಯ ಪಡೆಗಳು ಪೀಪಲ್ ಲಿಬರೇಶನ್ ಆರ್ಮಿಯು ಪೂರ್ವ ಲಡಾಖ್‌ನಲ್ಲಿ ಭಾರತದ ಗಡಿ ಒಳಗೆ ನುಗ್ಗುವುನ್ನು ಆಗಸ್ಟ್ 29/30, 2020 ರ ರಾತ್ರಿ ತಡೆದಿವೆ. ಆದ್ದರಿಂದ, ಈ ಘಟನೆ ಸಂಭವಿಸುವ ಮೊದಲೇ ಈ ವೀಡಿಯೊ ಅಂತರ್ಜಾಲದಲ್ಲಿ ಲಭ್ಯವಿತ್ತು.

ಅಲ್ಲದೆ, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಕೆಲವು ಪ್ರಮುಖ ಎತ್ತರಗಳನ್ನು ವಿಶೇಷ ಗಡಿನಾಡು ಪಡೆ (ಎಸ್‌ಎಫ್‌ಎಫ್) ವಶಪಡಿಸಿಕೊಂಡಿದೆ ಎಂದು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವಿಶೇಷ ಗಡಿನಾಡು ಪಡೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2020ರ ಆಗಸ್ಟ್ 29/30 ರಂದು ಪೂರ್ವ ಲಡಾಕ್‌ನಲ್ಲಿ ನಡೆದ ಘರ್ಷಣೆಗೂ ಸೇನಾ ಸಿಬ್ಬಂದಿ ನೃತ್ಯ ಮಾಡುವ ಈ ವಿಡಿಯೋಗೂ ಸಂಬಂಧವಿಲ್ಲ.

 – ಸೋಮಶೇಖರ್ ಚಲ್ಯ


ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರವು PFI ಮತ್ತು SDPI ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆದಿತ್ತೇ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights