ಭಾರತದಲ್ಲಿ 40 ಲಕ್ಷ ಗಡಿ ದಾಟಿದ ಕೊರೊನಾ ಪ್ರಕರಣಗಳು : ಒಂದೇ ದಿನ 86,432 ಕೇಸ್!
ವಿಶ್ವದಲ್ಲಿ 40 ಲಕ್ಷ ಕೋವಿಡ್ ಪ್ರಕರಣಗಳನ್ನು ದಾಟಿದ ಭಾರತ 3 ನೇ ಸ್ಥಾನ ಪಡೆದುಕೊಂಡಿದೆ. ಏಕದಿನ 86,432 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಭಾರತ ಸೋಂಕಿತರಲ್ಲಿ 40 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಒಟ್ಟು ಪ್ರಕರಣಗಳ ಸಂಖ್ಯೆ ಈಗ 40,23,179 ರಷ್ಟಿದೆ, ಇದು ಅಮೇರಿಕಾ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಪೀಡಿತ ರಾಷ್ಟ್ರವಾದ ಬ್ರೆಜಿಲ್ಗಿಂತ ಸುಮಾರು 70,000 ಪ್ರಕರಣಗಳು ಕಡಿಮೆ ಇದೆ. ಈವರೆಗೆ 40,91,801 ವರದಿ ಮಾಡಿರುವ ದಕ್ಷಿಣ ಅಮೆರಿಕಾ ದೇಶ ವೈರಸ್ ಹರಡುವುದನ್ನು ಸರಾಗಗೊಳಿಸುವ ಆರಂಭಿಕ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಭಾರತವು 24 ಗಂಟೆಗಳ ಅವಧಿಯಲ್ಲಿ 1,089 ಕೋವಿಡ್ ಸಂಬಂಧಿತ ಸಾವುಗಳಿಗೆ ಸಾಕ್ಷಿಯಾಗಿದೆ. ಒಟ್ಟು ಸಾವಿನ ಸಂಖ್ಯೆ 69,561 ಕ್ಕೆ ತಲುಪಿದೆ. ದೇಶದಲ್ಲಿ ಸುಮಾರು 31 ಲಕ್ಷ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣವನ್ನು ಶೇಕಡಾ 77.2 ಕ್ಕೆ ಏರಿದೆ.