ಮನುಷ್ಯರ ಮೇಲೆ ಸೋಂಕುನಿವಾರಕ ಸಿಂಪಡಣೆ ಆರೋಗ್ಯಕ್ಕೆ ಹಾನಿಕಾರಕ: ಸಿಂಪಡಣೆ ತಡೆದು ಸುಪ್ರೀಂ ಸೂಚನೆ
ಮನುಷ್ಯರ ಮೇಲೆ ವಾಕ್‌ಇನ್ ಸುರಂಗ ಮತ್ತು ಪೈಪುಗಳ ಮೂಲಕ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಎಲ್ಲಾ ಕಡೆಗಳನ್ನು ಸೋಂಕು ಸಿಂಪಡಿಸುವ ಸುರಂಗಗಳನ್ನು ಸ್ಥಾಪಿಸಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸೋಂಕುನಿವಾರಕಕ್ಕಾಗಿ ರಾಸಾಯನಿಕ ಸೋಂಕುನಿವಾರಕಗಳನ್ನು ಸಿಂಪಡಿಸುವುದು ಸೇರಿ ಸೋಂಕುಗಳ ಸುರಂಗಗಳ ಬಳಕೆ, ಸ್ಥಾಪನೆ, ಉತ್ಪಾದನೆ, ಜಾಹೀರಾತುಗಳನ್ನು ನಿಷೇಧಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ .ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠವು, ಮನುಷ್ಯರ ಮೇಲೆ ರಸಾಯನಿಕ ಔಷಧಿ ಸಿಂಪಡಿಸುವುದನ್ನು ಪ್ರಶ್ನಿಸಿದೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಲಾಗಿತ್ತು. ಅಲ್ಲದೇ ಈಗ ಎಲ್ಲಾ ಕಚೇರಿಗಳು, ಕೆಲಸದ ಸ್ಥಳಗಳು, ರಸ್ತೆಗಳಲ್ಲಿ ಜನರ ಮೇಲೆ ಔಷಧಿ ಸಿಂಪಡಿಸಲಾಗುತ್ತಿದೆ. ಇದನ್ನು ನಿಲ್ಲಿಸುವಂತೆ ಆದೇಶಿಸಲು ಸಾಲಿಟರಿ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠವನ್ನು ಕೋರಿದ್ದರು.

ನ್ಯಾಯಾಲಯದ ನೋಟಿಸ್‌ಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಫಿಡವಿಟ್‌ನಲ್ಲಿ, ವಾಕ್-ಇನ್ ಸುರಂಗಗಳ ಮೂಲಕ ಜನರು ಅಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬ ವರದಿಗಳನ್ನು ಬಂದ ನಂತರ ಸಲಹಾ ಸಮಿತಿ ಜೊತೆಗೆ ಏಪ್ರಿಲ್ 8 ರಂದು ಸಭೆ ನಡೆಸಲಾಗಿದೆ. ಜೊತೆಗೆ ಮಾನವರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದನ್ನು ಯಾವುದೇ ಸಂದರ್ಭದಲ್ಲೂ ಶಿಫಾರಸು ಮಾಡುವುದಿಲ್ಲ ಮತ್ತು ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಕಾರಕವಾಗಿದೆ ಎಂದು ಸಮಿತಿ ಹೇಳಿದೆ.
ರಾಸಾಯನಿಕಗಳು ಮಾನವನ ಚರ್ಮಕ್ಕೆ ಹಾನಿಕಾರಕ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಯಾವುದೇ ರಾಸಾಯನಿಕ ಸೋಂಕು ನಿವಾರಕವನ್ನು ಬಾಹ್ಯವಾಗಿ ಸಿಂಪಡಿಸುವುದರಿಂದ ಮೊದಲೇ ವ್ಯಕ್ತಿಯ ದೇಹಕ ಪ್ರವೇಶಿಸಿದ ವೈರಸ್ ಅನ್ನು ಕೊಲ್ಲುವುದಿಲ್ಲ ಎಂದು ಸಮಿತಿ ಏಪ್ರಿಲ್ 18 ರಂದು ನೀಡಿದ ವರದಿಯನ್ನು ನ್ಯಾಯಾಲಯದಲ್ಲಿ ಸಚಿವಾಲಯ ಪ್ರಸ್ತುತಪಡಿಸಿತು.
ಆದರೂ ಎಲ್ಲೆಡೆ ಸೋಂಕು ನಿವಾರಕಗಳನ್ನು ಅಳವಡಿಸಲಾಗುತ್ತಿದೆ. ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಕನ್ನಡಿಗರನ್ನು ಬಂಧಿಸಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟ ಸರ್ಕಾರ

