ಹೃದಯಾವಿದ್ರಾವಕ ಘಟನೆ : 5 ರೂಪಾಯಿ ನಾಣ್ಯ ನುಂಗಿ ಪುಟ್ಟ ಬಾಲಕಿ ಸಾವು..!
5 ರೂಪಾಯಿ ನಾಣ್ಯದಿಂದಾಗಿ ಬಾಲಕಿಯೋರ್ವಳು ದುರಂತ ಸಾವನ್ನಪ್ಪಿದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ನಡೆದಿದೆ.
ಹೌದು.. ನಾಲ್ಕು ವರ್ಷದ ಬಾಲಕಿಯೊಬ್ಬಳು ಐದು ರೂಪಾಯಿ ನಾಣ್ಯವನ್ನು ನುಂಗಿ ಸಾವನ್ನಪ್ಪಿದ ಹೃದಯಾವಿದ್ರಾವಕ ಘಟನೆ ನಡೆದಿದೆ. ಖುಷಿ ಎಂಬಾ ಪುಟ್ಟ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯವನ್ನು ಬಾಯಿಗೆ ಹಾಕಿಕೊಂಡಿದೆ. ತನ್ನ ಅಜ್ಜಿಯ ಮನೆಯಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕೂಡಲೆ ಎಚ್ಚೆತ್ತುಕೊಂಡ ಕುಟುಂಬಸ್ಥರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಣ್ಯ ವನ್ನು ಹೊರತಗಿಯಲು ಸಾಧ್ಯವಾಗಲಿಲ್ಲ.
ಭಯಗೊಂಡ ಕುಟುಂಬಸ್ಥರು ಗಾಬರಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿತ್ತು.