2021ರ ಚುನಾವಣೆಗೆ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ರಜಿನಿಕಾಂತ್!
ಸ್ಟಾರ್ ನಟ ರಜನಿಕಾಂತ್ ಅವರು ಸೋಮವಾರ (ಇಂದು) ಚೆನ್ನೈನಲ್ಲಿ ತಮ್ಮ ಪದಾಧಿಕಾರಿಗಳನ್ನು ಭೇಟಿಯಾಗಲಿದ್ದು, 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ರಾಜಕೀಯ ಪಕ್ಷವನ್ನು (ರಜನಿಕಾಂತ್ ಮಕ್ಕಲ್ ಮಂದಾರಂ) ಪ್ರಾರಂಭಿಸುವುದಾಗಿ ಪಕ್ಷದ ಮೂಲಗಳು ಹೇಳಿವೆ.
ಇಂದು ನಡೆಯಲಿರುವ ಪಕ್ಷದ ಸಭೆಯಲ್ಲಿ ರಜನಿಕಾಂತ್ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸುವ ತಮ್ಮ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.
ಆರೋಗ್ಯ ಸಮಸ್ಯೆಗಳ ಎದುರಿಸುತ್ತಿರುವ ರಜನಿಕಾಂತ್ ರಾಜಕೀಯಕ್ಕೆ ಧುಮುಕುವುದು ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡಿದ್ದರು. ಆದರೂ ರಜನಿಕಾಂತ್ ರಾಜಕೀಯದಲ್ಲಿ ಸಕ್ರಿಯರಾಗಲು ಮುಂದಾಗಿದ್ದಾರೆ.
ಇದನ್ನೂ ಓದಿ: ವೋಟರ್ ಐಡಿಯೇ ನಮ್ಮ ಅಸ್ತ್ರ; ತಮಿಳುನಾಡು ಜನರಿಗೆ ಕಮಲ್ ಹಾಸನ್ ಕರೆ
ರಜಿನಿಕಾಂತ್ ಮಕ್ಕಲ್ ಮಂದಿರ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ರಜಿನಿಕಾಂತ್ ಸಭೆ ಚೆನ್ನೈನಲ್ಲಿ ನಡೆಸಲಿದ್ದಾರೆ.
“ಸರಿಯಾದ ಸಮಯದಲ್ಲಿ, ರಜಿನಿ ಮಕ್ಕಲ್ ಮಂದಿರಂನ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ನನ್ನ ರಾಜಕೀಯ ನಿಲುವಿನ ಬಗ್ಗೆ ಜನರಿಗೆ ತಿಳಿಸುತ್ತೇನೆ” ಎಂದು ಒಂದು ತಿಂಗಳ ಹಿಂದೆ ರಜನಿಕಾಂತ್ ಹೇಳಿದ್ದಾರೆ.
ಏಪ್ರಿಲ್-ಮೇ 2021 ರ ಅವಧಿಯಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ತಮಿಳುನಾಡು: 2021ರ ಚುನಾವಣೆಗೆ BJP ಮತ್ತು AIADMK ಮೈತ್ರಿಗೆ ಅಮಿತ್ ಶಾ ಒಪ್ಪಿಗೆ!

