ಕಾಂಗ್ರೆಸ್ ತೊರೆದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ ಸೇರ್ಪಡೆ!
ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಂಗ್ರೆಸ್ ಪಕ್ಷ ತೊರೆದಿದ್ದು, ಡಿಸೆಂಬರ್ 01ರಂದು ಶಿವಸೇನೆ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ತಿಳಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಊರ್ಮಿಳಾ ಸೋತಿದ್ದರು. ನಂತರ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತಿದ್ದ ಊರ್ಮಿಳಾ ಪಕ್ಷ ತೊರೆದಿದ್ದರು.
ಊರ್ಮಿಳಾ ಹೆಸರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು ಶಿವಸೇನೆಯು ಮಹಾರಾಷ್ಟ್ರ ರಾಜ್ಯಪಾಲರಾದ ಬಿ ಎಸ್ ಕೊಶ್ಯರಿಗೆ ಕಳುಹಿಸಲಾಗಿದೆ.
ಇತರ 11 ಜನರ ಹೆಸರನ್ನು ರಾಜ್ಯಪಾಲರ ಕೋಟಾದಿಂದ ನಾಮನಿರ್ದೇಶನ ಮಾಡಲು ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ರವಾನಿಸಿದೆ. ಈ 12 ಮಂದಿ ಪಟ್ಟಿಯನ್ನು ರಾಜ್ಯಪಾಲರೂ ಇನ್ನೂ ಅಂಗೀಕರಿಸಬೇಕಿದೆ.
ಇದನ್ನೂ ಓದಿ: ’ಕಾಂಗ್ರೆಸ್ ರೈತರು’ ಎಂದ ಸಿಟಿ ರವಿ; ಹೊಟ್ಟೆಗೆ ಏನು ತಿಂತಿಯಾ ಎಂದ ನೆಟ್ಟಿಗರು

