1650 ಎಕರೆ ಅರಣ್ಯವನ್ನೇ ದತ್ತು ಪಡೆದು ಅಭಿವೃದ್ಧಿಗೆ ಮುಂದಾದ ನಟ ಪ್ರಭಾಸ್‌

ಟಾಲಿವುಡ್‌ನ ಖ್ಯಾತ ನಟ ಪ್ರಭಾಸ್ ಅವರು ಒಂದು ಅರಣ್ಯವನ್ನೇ ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಬ್ಯಾಕ್‌ ಟು ಬ್ಯಾಕ್‌ ಸೂರಪ್‌ ಹಿಟ್‌ ಸಿನಿಮಾಗಳನ್ನು ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ಪ್ರಭಾಸ್‌, ಈಗ ಅರಣ್ಯ ರಕ್ಷಣೆಗೆ ಮುಂದಾಗಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೈದರಾಬಾದ್ ಬಳಿಯಲ್ಲಿರುವ 1650 ಎಕರೆ ಪ್ರದೇಶದ ಕಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದಿರುವ ಪ್ರಭಾಸ್‌, ಅರಣ್ಯ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಭಾಸ್‌, ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕಿದ್ದು, ಅರಣ್ಯದ ಅಭಿವೃದ್ಧಿಗಾಗಿ 2 ಕೋಟಿ ರೂ. ಹಣವನ್ನು ಅರಣ್ಯಾಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದ್ಧಾರೆ. ಅಲ್ಲದೆ, ಅರಣ್ಯ ಉದ್ಯಾನವನಕ್ಕಾಗಿ ಅಡಿಗಲ್ಲು ಕಾರ್ಯಕ್ರಮವನ್ನು ಕೂಡ ಪ್ರಭಾಸ್ ನೆರವೇರಿಸಿದ್ದಾರೆ.

https://twitter.com/PrabhasRaju/status/1302982336473047044?s=20


ಇದನ್ನೂ ಓದಿ: ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದಾದ ಕಿಚ್ಚ ಸುದೀಪ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights